ಬೆಳ್ತಂಗಡಿ ಆರಕ್ಷಕ ಠಾಣಾ ವೃತ್ತ ನಿರೀಕ್ಷಕರಾಗಿ ಶಿವಕುಮಾರ್ ಬಿ ನೇಮಕ

ಬೆಳ್ತಂಗಡಿ: ಬೆಳ್ತಂಗಡಿ ಆರಕ್ಷಕ ಠಾಣಾ ವೃತ್ತ ನಿರೀಕ್ಷಕರಾಗಿ ಶಿವಕುಮಾರ್ ಬಿ ಯವರು ನೇಮಕಗೊಂಡಿದ್ದಾರೆ.

ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಆರಕ್ಷಕ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಇವರನ್ನು ಬೆಳ್ತಂಗಡಿ ಆರಕ್ಷಕ ಠಾಣಾ ವೃತ್ತ ನಿರೀಕ್ಷಕರಾಗಿ ನೇಮಕಗೊಳಿಸಿ ಸರಕಾರ ಆದೇಶ ನೀಡಿದೆ.

ಈ ಹಿಂದೆ ಬೆಳ್ತಂಗಡಿ ಆರಕ್ಷಕ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯದಲ್ಲಿದ್ದ ಸಂದೇಶ್ ಪಿ.ಜಿ ಯವರು ಬಜಪೆ ಆರಕ್ಷಕ ಠಾಣೆಗೆ ವರ್ಗಾವಣೆ ಹೊಂದಿರುವ ಹಿನ್ನೆಲೆಯಲ್ಲಿ ಶಿವಕುಮಾರ್ ಬಿ ಯವರು ಜು.1ರಿಂದ ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿ ಸೇವೆಗೆ ಹಾಜರಾಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.