ಬೆಳ್ತಂಗಡಿ: ಪೂರ್ಣಕಾಲಿಕ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಭುವನೇಶ ಜೆ ಅಧಿಕಾರ ಸ್ವೀಕಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪೂರ್ಣಕಾಲಿಕ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಭುವನೇಶ ಜೆ ಅವರು ಪದೋನ್ನತಿಗೊಂಡು (ಗ್ರೂಪ್ ಬಿ ವೃಂದ) ಜೂ.23 ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಜಾಡೆಂಕಿ ನಿವಾಸಿಯಾಗಿರುವ ಇವರು, ಬೆಳ್ತಂಗಡಿ ಬಿಇಒ ಕಚೇರಿಯಲ್ಲಿ ತನಿಖಾಧಿಕಾರಿಯಾಗಿದ್ದ ಕುಂಜ್ಞಣ್ಣ ಗೌಡ ರವರ ಪುತ್ರರಾಗಿದ್ದಾರೆ.
ಭುವನೇಶ ಜೆ ರವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಪಿಎಡ್ ಅನ್ನು ಪ್ರಥಮ ರ್‍ಯಾಂಕ್‌ನೊಂದಿಗೆ ಪೂರೈಸಿದ್ದು, ಎಂಪಿಎಡ್ ಅದೇ ಯುನಿವರ್ಸಿಟಿಯಲ್ಲಿ ಪೂರ್ಣಗೊಳಿಸಿದ್ದಾರೆ.
ಬಳಿಕ ಹಾಸನ ಜಿಲ್ಲೆಯ ಹೊಂಗೆರೆ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ 1992 ರಲ್ಲಿ ನೇಮಕಾತಿಹೊಂದಿದ್ದು, ಬಳಿಕ ಸರಕಾರಿ ಪ್ರೌಢಶಾಲೆಗಳಾದ ಕರಾಯ, ಮೂಡಬಿದ್ರೆಯ ಹೊಸಬೆಟ್ಟು, ಮಂಗಳೂರು ತಾಲೂಕಿನ ಮುತ್ತೂರು, ಪುತ್ತೂರು ತಾಲೂಕಿನ ವಳಾಲ್ ಮತ್ತು ಬೆಳ್ತಂಗಡಿ ತಾಲೂಕಿನ ಪದ್ಮುಂಜ, ಎರಡು ವರ್ಷ ಬಲ್ಮಠ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ.
ಜೊತೆಗೆ 2012 ರಿಂದ ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಪ್ರಭಾರ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.