ಬೆಳ್ತಂಗಡಿ‌ ಧರ್ಮಪ್ರಾಂತ್ಯದ ಟಾಸ್ಕ್ ಫೋರ್ಸ್ ಹಾಗೂ ಎಸ್.ಎಂ.ವೈ.ಎಂ ವತಿಯಿಂದ ಸಿಯೊನ್ ಆಶ್ರಮದಲ್ಲಿ ಸ್ವಚ್ಛತಾ ಅಭಿಯಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನೆರಿಯ:ಇಲ್ಲಿನ ಸಿಯೊನ್ ಆಶ್ರಯದಲ್ಲಿ ಇತ್ತೀಚೆಗಿನ ಕೋವಿಡ್ ಮಹಾಸ್ಫೋಟದ ಪರಿಣಾಮವಾಗಿ ಸಿಯೊನ್ ಆಶ್ರಮದ ನಿರಾಶ್ರಿತರನ್ನು, ಬೆಳ್ತಂಗಡಿ ತಾಲೂಕು ಆಸ್ಪತ್ರೆ ಹಾಗೂ ಧರ್ಮಸ್ಥಳ ರಜತಾದ್ರಿ ಸರಕಾರಿ ಕ್ವಾರೆಂಟೈನ್ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದ್ದು ಪ್ರಸ್ತುತ ಕ್ವಾರೆಂಟೈನ್ ಮುಗಿಸಿ ಜೂ.20 ರಂದು ಮರಳಿ ಮನೆ ಸೇರಲಿದ್ದಾರೆ.

ಈ ಮಧ್ಯೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಕೋವಿಡ್ ಟಾಸ್ಕ್ ಫೋರ್ಸ್ ಹಾಗೂ ಯುವಜನ ಒಕ್ಕೂಟ ಹಾಗೂ ಗಂಡಿಬಾಗಿಲು ಚರ್ಚ್ ಆಡಳಿತ ಮಂಡಳಿಯ ನೇತೃತ್ವದಲ್ಲಿ ಬ್ರಹತ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಮಾನೇಜಿಂಗ್ ಟ್ರಸ್ಟಿ ಶ್ರಿ. ಯು.ಸಿ ಪೌಲೋಸ್, ಸುಭಾಷ್, ಸಂಧ್ಯಾ ಇವರ ಮಾರ್ಗದರ್ಶನದಂತೆ ಸ್ವಚ್ಛತೆ ನಡೆಸಲಾಯಿತು. ಸುಮಾರು 50 ಕ್ಕಿಂತ ಹೆಚ್ಚು ಎಸ್.ಎಂ.ವೈ.ಎಂ ಸದಸ್ಯರು ಹಾಗೂ 6 ಮಂದಿ ಧರ್ಮಗುರುಗಳ ಸಹಬಾಗಿತ್ವದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಯಿತು.

ಧರ್ಮ ಪ್ರಾಂತೀಯ ಟಾಸ್ಕ್ ಫೋರ್ಸ್ ನ ಸಂಯೋಜಕರಾದ ವಂ.ಫಾ. ಬಿನೋಯಿ ಎ ಜೆ, ಸಹ ಸಂಯೋಜಕರಾದ ವಂ.ಫಾ. ಷಾಜಿ ಮಾತ್ಯು, ಎಸ್.ಎಂ.ವೈ.ಎಂ ನಿರ್ದೇಶಕರಾದ ವಂ.ಫಾ.ಚೀರನ್ ಜೋಸೆಫ್ , ವಂ.ಫಾ. ರೋಬಿನ್, ವಂ.ಫಾ.ಅಜಯ್, ವಂ.ಫಾ.ಕ್ರಿಸ್ಟಿ, ವಂ.ಫಾ ಸುನಿಲ್ ಉಪಸ್ಥಿತರಿದ್ದರು.

ಗಂಡಿಬಾಗಿಲು ಚರ್ಚ್ ಆಡಳಿತ ಮಂಡಳಿಯ ಶ್ರಿ.ಚಾಂಡಿ,  ಜೋಯ್, ಮನೋಜ್, ಸುಜನ್ ಥೋಮಸ್, ಬೇಬಿ ಇವರು ವ್ಯವಸ್ಥೆ ಗಳ ಮೇಲುಸ್ತುವಾರಿ ವಹಿಸಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.