ಉಜಿರೆ: ಕೋವಿಡ್ ಕಾರ್ಯಪಡೆ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಕೋವಿಡ್ ಕಾರ್ಯಪಡೆ ಸಭೆ ಜೂ.17ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ  ಪುಷ್ಪಾವತಿ ಆರ್ ಶೆಟ್ಟಿ ವಹಿಸಿದ್ದು, ಉಜಿರೆ ಗ್ರಾಮದಲ್ಲಿ ವಿಧಿಸಲಾಗಿರುವ ಸೀಲ್ಡೌನ್ ತೆರೆಯುವ ಕುರಿತು ಚರ್ಚಿ ನಡೆಸಲಾಯಿತು. ಆದರೆ ಸೋಂಕು ನಿಯಂತ್ರಣದಲ್ಲಿ ಸೀಲ್ ಡೌನ್ ಅಗತ್ಯವಾಗಿದ್ದು, ಎಲ್ಲರೂ ಒಮ್ಮತದಿಂದ ಸೋಮವಾರದವರೆಗೆ ಯಥಾಸ್ಥಿತಿಯಂತೆ ಸೀಲ್ ಡೌನ್  ಮುಂದುವರಿಸುವಂತೆ ತೀರ್ಮಾನ ಮಾಡಲಾಯಿತು.

ಹಾಗೇ ಸೋಂಕು ಹರಡದಂತೆ ತಡೆಯಲು ಉಜಿರೆ ಗ್ರಾ.ಪಂ ವ್ಯಾಪ್ತಿಯ ನಿವಾಸಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ಕಡ್ಡಾಯ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದ್ದು, ಈ ಹಿನ್ನಲೆಯಲ್ಲಿ ಜೂ.18ರಂದು ಉಜಿರೆ ಗ್ರಾ.ಪಂ ಸಭಾ ಭವನದಲ್ಲಿ ಬೆ.10ರಿಂದ ನಡೆಸಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಉಪಾಧ್ಯಕ್ಷ ರವಿಕುಮಾರ್ ಬರಮೇಲು,  ವ್ಯೆದ್ಯಧಿಕಾರಿ ಡಾ.ಅಕ್ಷತ ರಾಜ್, ಪಂಚಾಯತು ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ,ಕಾರ್ಯದರ್ಶಿ ಜಯಂತ್ ಯು.ಬಿ, ಗ್ರಾಮ ಕರಣಿಕರು ಪ್ರದೀಪ್ ಕುಮಾರ್, ಆರೊಗ್ಯ ಸಹಾಯಕರಾದ ಸುಜಾತ, ಪಂಚಾಯತ್ ಸದಸ್ಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಶಿಕ್ಷಕರು,  ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.