ತೋಟತ್ತಾಡಿ ಕುಂಟಾಡಿ ಪರಿಸರದಲ್ಲಿ ಕಾಡಾನೆಗಳ ದಿಢೀರ್ ದಾಳಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಹಲವರ ಕೃಷಿ ತೋಟಗಳಿಗೆ ಹಾನಿ

ತೊಟತ್ತಾಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಕುಂಟಾಡಿ ಎಂಬಲ್ಲಿ ಕಾಡಾನೆಗಳ ಹಿಂಡು ದಿಢೀರ್ ದಾಳಿಯಿಟ್ಟಿದೆ. ಜೂ.17 ರಂದು ಮುಂಜಾನೆ ಕಾಡಾನೆಗಳ ಗುಂಪೊಂದು ಕೃಷಿ ತೋಟಕ್ಕೆ ದಾಳಿಯಿಟ್ಟಿದ್ದು, ಹಲವರ ತೆಂಗು, ಕಂಗು, ಬಾಳೆ ಕೃಷಿಯನ್ನು ದ್ವಂಸಗೊಳಿಸಿದೆ.

ಕೃಷಿಕ ಅಂತೋಣಿ ವಿ.ಜೆ ರವರ 150 ಬಾಳೆ ಗಿಡ, 30ಕ್ಕೂ ಅಧಿಕ ಅಡಿಕೆ ಗಿಡ, ಮಿನಿ ಬೇಬಿಯವರ 50ಕ್ಕೂ ಅಧಿಕ ಬಾಳೆ ಕೃಷಿ ಹಾಗೂ ಸುತ್ತಮುತ್ತಲಿನ ತೋಟಗಳಿಗೂ ನುಗ್ಗಿ ಕೃಷಿಯನ್ನು ನಾಶಗೊಳಿಸಿದ್ದು ಅಪಾರ ನಷ್ಟವುಂಟಾಗಿದೆ.

ಅಲ್ಲದೆ ಆನೆಗಳ ಹಿಂಡು ಕುಂಟಾಡಿ ಪರಿಸರದಲ್ಲೇ ಮೊಕ್ಕಾಂ ಹೂಡಿದ್ದು, ರಾತ್ರಿ ವೇಳೆಯೂ ಕೃಷಿ ತೋಟಕ್ಕೆ ನುಗ್ಗುವ ಮುನ್ಸೂಚನೆಯಿರುವುದರಿಂದ ಆ ಪರಿಸರದಲ್ಲಿ ವಾಸ್ತವ್ಯವಿರುವ ನಾಗರಿಕರು ಭಯಭೀತರಾಗಿದ್ದಾರೆ.

ಈ ಬ್ಗಗೆ ಸ್ಥಳೀಯರು ಅರಣ್ಯ ಇಲಾಖೆಗೆ ವಿಚಾರ ತಿಳಿಸಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪಟಾಕಿ ಸಿಡಿಸಿ ಹಾಗೂ ಇನ್ನಿತರ ವಿಧಾನಗಳಿಂದ ಆನೆಗಳ ಹಿಂಡನ್ನು ಓಡಿಸುವ ಪ್ರಯತ್ನಗಳು ನಡೆಯುತ್ತಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.