ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ನಡೆಯಲಿದೆ ಹೆದ್ದಾರಿ ಅಗಲೀಕರಣ ಕಾಮಗಾರಿ: ಗುರುವಾಯನಕೆರೆಯಿಂದ ಉಜಿರೆ ಚತುಷ್ಪಥ ರಸ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ‘ಏರೆಗಾವುಯೇ ಆ ಟಿ.ಬಿ. ಕ್ರಾಸ್‌ದಲ್ಪ ಗಾಡಿ ಗಿಡ್ಪುನ, ದಾಯಿತಾ ವೆಹಿಕಲ್ಸ್ ಮರ‍್ರೆ..?’ ಅನ್ನುವ ಈ ಭಾಗದ ವಾಹನ ಸವಾರರ ಚಿಂತೆಗೆ ಶೀಘ್ರವೇ ಮುಕ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅದರೊಂದಿಗೆ, ಅದರೊಂದಿಗೆ ಅಗಲೀಕರಣಕ್ಕೆ ಯಾರ್ಯಾರ ಭೂಮಿ ಮತ್ತು ಕಟ್ಟಡ ಹೋಗಲಿದೆ ಎಂಬ ಬಗ್ಗೆ ಚಿಂತೆಯೂ ಪ್ರಾರಂಭವಾಗಲಿದೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿಯ ತನಕ ರಾಷ್ಟ್ರೀಯ ಹೆದ್ದಾರಿ ವಾರ್ಷಿಕ ಯೋಜನೆಯಡಿ ಕಾಮಗಾರಿ ನಡೆಸಲು ಈಗಾಗ್ಲೇ ಸರ್ವೆ ಕಾರ್ಯ ಆರಂಭವಾಗಿದೆ.

ರಾಷ್ಟ್ರೀಯ ಹೆದ್ದಾರಿ 73 (ಮಂಗಳೂರು-ತುಮಕೂರು) ಹಾದು ಹೋಗುತ್ತಿದ್ದರೂ ಕಿರಿದಾದ ರಸ್ತೆ ಕಾರಣದಿಂದ ಗುರುವಾಯನಕೆರೆಯಿಂದ ಉಜಿರೆ ಭಾಗದವರೆಗಿನ ಸಂಚಾರ ದುಸ್ತರವಾಗಿತ್ತು. ರಾಜ್ಯದ ಪ್ರಮುಖ ಯಾತ್ರಾ ಸ್ಥಳ ಧರ್ಮಸ್ಥಳಕ್ಕೆ ಈ ರಸ್ತೆ ಮೂಲಕ ಹಾದು ಹೋಗಬೇಕಿದ್ದ ಕಾರಣದಿಂದಲೂ ವರ್ಷದ ಬಹುತೇಕ ದಿನಗಳಲ್ಲಿ ಇಲ್ಲಿ ವಾಹನ ದಟ್ಟಣೆ ಸರ್ವೇ ಸಾಮಾನ್ಯ ಎಂಬತಾಗಿತ್ತು. ಇದೀಗ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ಅಗಲೀಕರಣ ಕಾಮಗಾರಿಗೆ ಮುಹೂರ್ತ ಕೂಡಿಬಂದಿದೆ. ಪುಂಜಾಲಕಟ್ಟೆಯಿಂದ ಚಾರ್ಮಾಡಿಯ ತನಕ ರಾಷ್ಟ್ರೀಯ ಹೆದ್ದಾರಿ ವಾರ್ಷಿಕ ಯೋಜನೆಯಡಿ ರಸ್ತೆ ಕಾಮಗಾರಿ ನಡೆಸಲು ಈಗಾಗಲೇ ಸರ್ವೆ ಕಾರ್ಯ ಪ್ರಾರಂಭಗೊಂಡಿದೆ.

ಗುರುವಾಯನಕೆರೆಯಿಂದ ಉಜಿರೆವರೆಗೆ ಚತುಷ್ಪಥ ರಸ್ತೆ
ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ವಿಭಿನ್ನ ಮಾದರಿಯಲ್ಲಿ ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಗುರುವಾಯನಕೆರೆಯಿಂದ ಉಜಿರೆವರೆಗಿನ ಚತುಷ್ಫಥ ರಸ್ತೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಲಾಗಿದೆ. 9 ಕಿಲೋಮೀಟರ್ ಚತುಷ್ಪಥ ರಸ್ತೆ, ಜೊತೆಗೆ ಬೀದಿ ದೀಪಗಳ ಅಳವಡಿಕೆ, ರಸ್ತೆ ಪಕ್ಕದ ಚರಂಡಿ ನಿರ್ಮಾಣ ಎಲ್ಲವೂ ಈ ಕಾಮಗಾರಿಯಲ್ಲಿ ನಡೆಯಲಿದೆ. ಇನ್ನು, ಪುಂಜಾಲಕಟ್ಟೆಯಿಂದ ಗುರುವಾಯನಕೆರೆಯವರೆಗೆ ಮತ್ತು ಉಜಿರೆಯಿಂದ ಚಾರ್ಮಾಡಿವರೆಗೆ ದ್ವಿಪಥ ರಸ್ತೆ ನಿರ್ಮಾಣಗೊಳ್ಳಲಿದೆ.

383.11 ಕೋಟಿಯಲ್ಲಿ 28.1 ಕಿಲೋ ಮೀಟರ್ ರಸ್ತೆ ಕಾಮಗಾರಿ
ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ 38.1 ಕಿಲೋ ಮೀಟರ್ ರಸ್ತೆ ಕಾಮಗಾರಿ ನಡೆಯಲಿದ್ದು, ಇದಕ್ಕಾಗಿ 383.11 ಕೋಟಿ ಮೀಸಲಿಡಲಾಗಿದೆ. ಸದ್ಯಕ್ಕೆ ಸರ್ವೆ ಕಾರ್ಯ ನಡೆಯುತ್ತಿದ್ದು, ಕಾಮಗಾರಿಯ ಟೆಂಡರ್ ಪ್ರಕ್ರಿಯೆಗೆ ಮುಂದಿನ ತಿಂಗಳಿನಲ್ಲೇ ಚಾಲನೆ ಸಿಗುವ ಸಾಧ್ಯತೆಯಿದೆ.

1 ದೊಡ್ಡ ಸೇತುವೆ, 9 ಕಿರು ಸೇತುವೆ 70 ಬಾಕ್ಸ್ ಮೋರಿ, 14 ಜಂಕ್ಷನ್‌ಗಳ ಕಾಮಗಾರಿ
ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ಕಾಮಗಾರಿಯಲ್ಲಿ 1 ದೊಡ್ಡ ಸೇತುವೆ ನಿರ್ಮಾಣವಾಗಲಿದೆ. ಬೆಳ್ತಂಗಡಿಯಲ್ಲಿರುವ ಸೇತುವೆ ಬದಲಾಗಿ, ಹೊಸ ಸೇತುವೆ ನಿರ್ಮಾಣವಾಗಲಿದೆ. ಇದರ ಜೊತೆ ರಸ್ತೆಯಲ್ಲಿ ಸಿಗುವ ಹಳ್ಳಗಳಿಗೆ ಒಟ್ಟು 9 ಕಿರು ಸೇತುವೆ ನಿರ್ಮಾಣವಾಗಲಿದೆ. 70 ಬಾಕ್ಸ್ ಮೋರಿಗಳು ಹಾಗೂ 14 ಜಂಕ್ಷನ್‌ಗಳು ಕೂಡ ನಿರ್ಮಾಣಗೊಳ್ಳಲಿವೆ. ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಪ್ರಮುಖ ಪಟ್ಟಣಗಳನ್ನು ಹೊರತುಪಡಿಸಿ, ಸಿಗುವ ಮದ್ದದ್ಕ, ಲಾಯಿಲ ಮುಂತಾದ ಪ್ರದೇಶಗಳಲ್ಲಿ ಜಂಕ್ಷನ್ ಮಾಡಲು ಯೋಜನೆ ರೂಪಿಸಲಾಗಿದೆ.

ಬೈಪಾಸ್ ರಸ್ತೆಯಲ್ಲ, ಬದಲಾಗಿ ಒಂದೇ ಮುಖ್ಯ ರಸ್ತೆ
ರಸ್ತೆ ಕಾಮಗಾರಿಗಳನ್ನು ಮಾಡುವಾಗ ಪ್ರಮುಖ ನಗರಗಳನ್ನು ಹಾದುಹೋಗದಂತೆ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿಯೂ ಕೂಡ ಹಾಗೇ ಆಗುತ್ತಾ ಅನ್ನುವ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿದೆ. ಪ್ರಸ್ತುತ ರೂಪಿಸಿರುವ ಪ್ಲ್ಯಾನ್ ಪ್ರಕಾರ ಇಲ್ಲಿ ಬೈಪಾಸ್ ರಸ್ತೆ ಇರುವುದಿಲ್ಲ ಎಂದು ಸುದ್ದಿ ಬಿಡುಗಡೆಗೆ ಖಚಿತ ಮಾಹಿತಿ ಲಭ್ಯವಾಗಿದೆ.

ರಸ್ತೆ ಅಗಲೀಕರಣಗೊಂಡರೆ, ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಒಟ್ಟು 38 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಕ್ಕೆಲಗಳಲ್ಲೂ ಭೂ ಸ್ವಾಧೀನ ನಡೆಸಬೇಕಾದ ಅಗತ್ಯವಿದೆ. ಪುಂಜಾಲಕಟ್ಟೆಯಿಂದ ಈ ಭಾಗದ ರಸ್ತೆ ಪಕ್ಕದಲ್ಲಿರುವ ಮನೆ, ಕಟ್ಟಡ, ಹೊಟೇಲ್, ಬಾರ್, ಕಾಂಪ್ಲೆಕ್ಸ್, ಮಾಲ್, ಬಹುಮಹಡಿ ಕಟ್ಟಡಗಳನ್ನು ತೆರವುಗೊಳಿಸಬೇಕಾದೀತು. ಈ ಭಾಗದಲ್ಲಿ ಯಾವ್ಯಾವ ಕಟ್ಟಡಗಳು ರಸ್ತೆ ಅಗಲೀಕರಣಕ್ಕೆ ನೆಲೆ ಕಳೆದುಕೊಳ್ಳಲಿವೆ ಎಂಬುದು ಈಗ ನಡೆಯುತ್ತಿರುವ ಸರ್ವೆ ಕಾರ್ಯ ಸಂಪೂರ್ಣವಾದ ಬಳಿಕವಷ್ಟೇ ಗೊತ್ತಾಗಲಿದೆಯಾದರೂ ಆ ಬಗ್ಗೆ ಈಗಾಗಲೇ ಚಿಂತೆ ಪ್ರಾರಂಭವಾಗಲಿದೆ.

ರಾಷ್ಟ್ರೀಯ ಹೆದ್ದಾರಿಯ ವಾರ್ಷಿಕ ಯೋಜನೆಯ ಈ ವರ್ಷದ ಪಟ್ಟಿಯಲ್ಲಿ ಈ ಕಾಮಗಾರಿಯನ್ನು ದಕ್ಷಿಣ ಕನ್ನಡ ಸಂಸದರ ಪ್ರಯತ್ನದಿಂದ ಸೇರಿಸಲಾಗಿದೆ. ಸರ್ವೆಕಾರ್ಯಗಳು ಭರದಿಂದ ಸಾಗುತ್ತಿದೆ. ಮತ್ತು ಆದಷ್ಟು ಬೇಗ ಈ ರಸ್ತೆ ಕಾಮಗಾರಿ ಆರಂಭವಾಗಲಿದೆ. ಗುರುವಾಯನಕೆರೆಯಿಂದ ಉಜಿರೆವರೆಗೆ ಚತುಷ್ಪಥ ರಸ್ತೆ, ಪುಂಜಾಲಕಟ್ಟೆಯಿಂದ ಗುರುವಾಯನಕೆರೆ ಮತ್ತು ಉಜಿರೆಯಿಂದ ಚಾರ್ಮಾಡಿಯವರೆಗೆ ದ್ವಿಪಥ ರಸ್ತೆ ನಿರ್ಮಾಣಗೊಳ್ಳಲಿದೆ.
– ಹರೀಶ್ ಪೂಂಜ, ಶಾಸಕರು ಬೆಳ್ತಂಗಡಿ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.