ಮಾಲಾಡಿ ಗ್ರಾ.ಪಂ.: ಟಾಸ್ಕ್-ಪೋರ್ಸ್ ಸಮಿತಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತದಲ್ಲಿ ಗ್ರಾ.ಪಂ ಅಧ್ಯಕ್ಷೆ  ಬೇಬಿ ಸುಸ್ಸಾನಾ ಮತ್ತು ಉಪಾಧ್ಯಕ್ಷ ದಿನೇಶ್ ಬಿ ಕರ್ಕೇರ ರವರ ನೇತೃತ್ವದಲ್ಲಿ ಕೊರೊನಾ ಟಾಸ್ಕ್ ಪೋರ್ಸ್ ಸಭೆ ಜೂ.16ರಂದು ನಡೆಯಿತು.

ಈ ಸಂದರ್ಭದಲ್ಲಿ ಕೊರೊನಾ ಪಾಸಿಟಿವ್ ಇರುವ ವ್ಯಕ್ತಿಗಳು ಎಲ್ಲೆಂದರಲ್ಲಿ ತಿರುಗಾಡುತ್ತಿರುವ ಬಗ್ಗೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಸಾರ್ವಜನಿಕರು  ಪಂಚಾಯತ್ ಗಮನಕ್ಕೆ ತಂದರು.

ಮನೆ ಭೇಟಿ ಸಂದರ್ಭದಲ್ಲಿ ನಮಗೆ ಜನರಿಂದ  ಸರಿಯಾದ ಸ್ಪಂದನೆ  ದೊರೆಯುತ್ತಿಲ್ಲ ಹಾಗೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಮತ್ತು ಪಂಚಾಯತ್ ಅಬಿವೃದ್ಧಿ ಅಧಿಕಾರಿ ಮುಂದಿನ ದಿನಗಳಲ್ಲಿ ಕೋವಿಡ್ ಟೆಸ್ಟ್ ಯಾರು ಮಾಡುವುದಿಲ್ಲ ಮತ್ತು ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಪಂಚಾಯತ್ ಕಡೆಯಿಂದ ಜರಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಘವೇಂದ್ರ, ಕಾರ್ಯದರ್ಶಿ ಯಶೋಧರ, ಸದಸ್ಯರುಗಳಾದ ಪುನೀತ್‌ಕುಮಾರ್, ಬೆನೆಡಿಕ್ಟಾ ಮಿರಾಂದ, ಉಮೇಶ್, ಸುಧಾಕರ್ ಆಳ್ವ, ಐರಿನ್, ದಿನೇಶ್ ಮೂಲ್ಯ, ಸೆಲೆಸ್ಟಿನ್ ಡಿ’ಸೋಜ, ಬೇಬಿ ಸುವರ್ಣ, ಆರಕ್ಷಕರಾದ ಅಬೂಬಕ್ಕರ್, ಗ್ರಾಮಕರಣಿಕ ಜಿ.ಎಸ್ ಮಲ್ಲೇಶ್,  ಗ್ರಾಮ ಸಹಾಯಕ ಎಂ. ಗುಣಕರ ಹೆಗ್ಡೆ ,  ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.