ನೇತ್ರಾವತಿ ಬಳಿ ಕಡೆವೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸ್ಥಳೀಯರು, ಉರಗ ತಜ್ಞ ಸ್ನೇಕ್ ಪ್ರಕಾಶ್  ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳಿಂದ ಕಡವೆಯ ರಕ್ಷಣಾ ಕಾರ್ಯ

ಧರ್ಮಸ್ಥಳ:   ಇಲ್ಲಿಯ ನೇತ್ರಾವತಿ ಬಳಿ ರಸ್ತೆ ಬದಿಯಲ್ಲಿ  ಕಡವೆಯೊಂದು  ಗಾಯಗೊಂಡ  ಸ್ಥಿತಿಯಲ್ಲಿ  ಜೂ.17 ರಂದು ಬೆಳಿಗ್ಗೆ  ಪತ್ತೆಯಾಗಿದೆ.

ಯಾವುದೋ ವಾಹನ ಈ ಕಡವೆಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.  ಗಾಯಗೊಂಡು ರಸ್ತೆ ಬದಿಯಲ್ಲಿ ಹೊರಳಾಡುತ್ತಿದ್ದ  ಈ ಹೆಣ್ಣು ಕಡವೆಯನ್ನು  ನೋಡಿದ ಸ್ಥಳೀಯರು ಕೂಡಲೇ  ಉರಗ ತಜ್ಞ ಸ್ನೇಕ್ ಪ್ರಕಾಶ್ ರವರಿಗೆ ಮಾಹಿತಿ ನೀಡಿದ್ದಾರೆ.

ಆ ಕೂಡಲೇ ಸ್ಥಳಕ್ಕೆ  ಭೇಟಿ ನೀಡಿದ  ಸ್ನೇಕ್  ಪ್ರಕಾಶ್ ರವರು  ಈ ಬಗ್ಗೆ ಅರಣ್ಯ ಇಲಾಖೆಗೆ  ವಿಚಾರ ತಿಳಿಸಿದರು. ತಕ್ಷಣ ಸ್ಪಂದಿಸಿದ  ಅರಣ್ಯ ವೀಕ್ಷಕ ರಾಜೇಶ್ ಮತ್ತು ತಂಡದವರು  ಸ್ಥಳಕ್ಕೆ ಆಗಮಿಸಿ ಗಾಯಗೊಂಡಿದ್ದ ಹೆಣ್ಭು ಕಡವೆಯನ್ನು ಪಿಕಪ್ ವಾಹನದಲ್ಲಿ ಸಾಗಿಸಿ ಉಜಿರೆಯ ಇಚ್ಚಿಲ ಪಶು ವೈದ್ಯಾಲಯದಲ್ಲಿ  ಸೂಕ್ತ ಚಿಕಿತ್ಸೆ  ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಒಟ್ಟಿನಲ್ಲಿ ಸ್ಥಳೀಯರು, ಉರಗ ತಜ್ಞ ಸ್ನೇಕ್ ಪ್ರಕಾಶ್  ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳ ಮುತುವರ್ಜಿಯಿಂದ ಕಡವೆಯ ರಕ್ಷಣೆ ಮಾಡಲಾಗಿದೆ. ಇವರ  ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.