ಸುದ್ದಿ ಫಲಶ್ರುತಿ: ಬೆಳ್ತಂಗಡಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ತಿಂಗಳ ಬಾಕಿ ವೇತನ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕಿನ ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವ ಕಾರ್ಯವನ್ನು ನಡೆಸುತ್ತಾ ಬಂದಿರುವ ಸುದ್ದಿ ಮಾಧ್ಯಮವು ಈ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ‘ಜನಾಧಿಕಾರದ ಅನಾವರಣ’ ಹಾಗೂ ‘ಜನ ಸೇವೆಯ ಅನಾವರಣ’ ಎಂಬೆರಡು ವಿನೂತನ ಕಾರ್ಯಕ್ರಮಗಳ ಮೂಲಕ ಜನರ ಸಮಸ್ಯೆಗಳಿಗೆ ಅಧಿಕಾರಿ ವರ್ಗ ಸ್ಪಂದಿಸುವಂತೆ ಮಾಡುವ ಮತ್ತು ಸಂಕಷ್ಟದಲ್ಲಿರುವ ವಿವಿಧ ವರ್ಗಗಳ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸವನ್ನು ಮಾಡುತ್ತಿದೆ.

ಜೂನ್ 14ರಂದು ಸುದ್ದಿ ಸ್ಟುಡಿಯೋದಲ್ಲಿ ನಡೆದ  ಫೋನ್ ಇನ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಅಂಗನಾವಾಡಿ ಕಾರ್ಯಕರ್ತೆಯರ ಪ್ರಮುಖರು ಮಾತನಾಡಿದ್ದರು ಮತ್ತು ಈ ಸಂದರ್ಭದಲ್ಲಿ ತಮಗೆ ವೇತನ ಬಾಕಿಯಾಗಿರುವ ಸಮಸ್ಯೆಗಳ ಕುರಿತಾಗಿ ಹಲವಾರು ಕಾರ್ಯಕರ್ತೆಯರು ತಮ್ಮ ಅಳಲು ತೋಡಿಕೊಂಡಿದ್ದರು.
ಈ ಕಾರ್ಯಕ್ರಮ ನಡೆದ 2ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಾಕಿಯಿದ್ದ 2 ತಿಂಗಳ ವೇತನವನ್ನು ಸರ್ಕಾರ ನೀಡಿದೆ. ಇದು ಸುದ್ದಿಯ ‘ಜನಸೇವೆಯ ಅನಾವರಣ’ ಕಾರ್ಯಕ್ರಮದ ಫಲಶ್ರುತಿ ಯಾಗಿದೆ”.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.