3 ತಿಂಗಳ ವಿದ್ಯುತ್ ಬಿಲ್ ಮನ್ನಾ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇದು ಸುಳ್ಳು ಸುದ್ದಿ, ವದಂತಿಗಳಿಗೆ ಕಿವಿಗೊಡಬೇಡಿ: ಮೆಸ್ಕಾಂ ಎಂ.ಡಿ ಸ್ಪಷ್ಟನೆ

ಬೆಳ್ತಂಗಡಿ: ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದು, ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ 3 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲಾಗಿದೆ ಎಂಬ ವದಂತಿಯು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಆದರೆ ಇದು ಸುಳ್ಳು ಸುದ್ದಿಯಾಗಿದ್ದು, ಇಂತಹ ವದಂತಿಗಳಿಗೆ ಕಿವಿಕೊಡಬೇಡಿ ಎಂಬುವುದಾಗಿ ಮೆಸ್ಕಾಂ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮೆಸ್ಕಾಂ ಲೆಟರ್ ಹೆಡ್

ಲಾಕ್‌ಡೌನ್‌ನಿಂದಾಗಿ ದಿನನಿತ್ಯ ದುಡಿದು/ಮಾಸಿಕ ವೇತನವನ್ನು ಅವಲಂಬಿಸಿ ಜೀವನ ನಡೆಸುವ ಬಡ ಮತ್ತು ಮಧ್ಯಮ ವರ್ಗದವರು ಆರ್ಥಿಕ ಸಂಕಷ್ಟದಲ್ಲಿದ್ದು, ಆರ್ಥಿಕ ಪ್ಯಾಕೇಜ್‌ಗಳು ಎಲ್ಲರಿಗೂ ತಲುಪದೇ ಇರುವ ಕಾರಣ 3 ತಿಂಗಳಿನ ವಿದ್ಯುತ್ ಬಿಲ್ ಮನ್ನಾ ಮಾಡಲಾಗಿದ್ದು, ಬಿಪಿಎಲ್ ಕಾರ್ಡು ಹೊಂದಿರುವ ಮನೆಯ ಸ್ಥಾವರಗಳ ಆರ್.ಆರ್ ಸಂಖ್ಯೆಯನ್ನು ಕೂಡಲೇ 3 ದಿನಗಳೊಳಗಾಗಿ ನೀಡಲು ಕೋರಲಾಗಿದೆ ಎಂದು ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ(ಮೆಸ್ಕಾಂ) ನಿಯಮಿತ ಈ ಲೆಟರ್ ಹೆಡ್‌ನಲ್ಲಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕಾ ಮತ್ತು ಪಾ ಉಪವಿಭಾಗ ಮೆಸ್ಕಾಂ ಬೆಜ್ಜವಳ್ಳಿ ಎಂಬವರ ಸಹಿ ಇರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಸ್ಕಾಂ ಮ್ಯಾನೇಂಜಿಂಗ್ ಡೈರೆಕ್ಟರ್ ಪ್ರಶಾಂತ್ ಮಿಶ್ರಾ ರವರು ಇದೊಂದು ಸುಳ್ಳು ಸುದ್ದಿಯಾಗಿದೆ. ಇಂತಹ ವದಂತಿಗಳಿಗೆಲ್ಲಾ ಕಿವಿಕೊಡಬೇಡಿ ಎಂಬುವುದಾಗಿ ಜನತೆಗೆ ತಿಳಿಯಪಡಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.