ಹಾಡು ಹಗಲೇ ಲಿಂಬೆ ಹಣ್ಣು ವ್ಯಾಪಾರಿಯ ದುಡ್ಡಿನ ಚೀಲವನ್ನು ಕದ್ದೊಯ್ದ ಕಳ್ಳ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳ್ಳನ ಬೆನ್ನು ಹತ್ತಿದ ಲಿಂಬೆ ವ್ಯಾಪಾರಿ: ದುಡ್ಡಿನ ಚೀಲ ಎಸೆದು ಕಳ್ಳ ಪರಾರಿ


ಬೆಳ್ತಂಗಡಿ: ಹಾಡು ಹಗಲೇ ಕಳ್ಳನೊಬ್ಬ ಲಿಂಬೆ ಹಣ್ಣು ವ್ಯಾಪಾರಿಯ ದುಡ್ಡಿನ ಚೀಲವನ್ನು ಕದ್ದೊಯ್ದ ಘಟನೆ ಜೂ.15 ರಂದು ಬೆಳಿಗ್ಗೆ ಬೆಳ್ತಂಗಡಿ ಮುಖ್ಯ ಬಸ್ಸು ತಂಗುದಾಣದ ಬಳಿ ನಡೆದಿದೆ.
ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಮಹಮ್ಮದ್ ಎಂಬವರು ಬೆಳ್ತಂಗಡಿ ಮುಖ್ಯ ಬಸ್ಸು ತಂಗುದಾಣದ ಬಳಿ ಲಿಂಬೆ ಹಣ್ಣು ವ್ಯಾಪಾರದಲ್ಲಿ ನಿರತರಾಗಿದ್ದ ವೇಳೆ ಕಳ್ಳನೊಬ್ಬ ಪಕ್ಕದಲ್ಲಿಯೇ ಇದ್ದ ಅವರ ದುಡ್ಡಿನ ಚೀಲವೊಂದನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ.

ಮಹಮ್ಮದ್ ಲಿಂಬೆ ವ್ಯಾಪಾರಿ

ಕೂಡಲೇ ಎಚ್ಚೆತ್ತುಕೊಂಡ ಮಹಮ್ಮದ್ ರವರು ಕಳ್ಳನನ್ನು ಬೆನ್ನುಹತ್ತಿದ್ದು, ಕಳ್ಳ ದುಡ್ಡಿನ ಚೀಲವನ್ನು ಎಸೆದು ಪರಾರಿಯಾಗಿದ್ದಾನೆ. ಚೀಲದಲ್ಲಿ ರೂ.400ರಷ್ಟು ನಗದು ಇತ್ತೆನ್ನಲಾಗಿದೆ. ಹಾಡುಹಗಲೇ ಈ ಕಳ್ಳತನ ನಡೆದಿರುವುದನ್ನು ಕಂಡು ರಸ್ತೆ ಬದಿ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.