ಗ್ರಾಮಗಳ ಸೀಲ್‌ಡೌನ್:  ಪಂಚಾಯತು ಆಡಳಿತ ಪ್ರಸ್ತಾವನೆ ಸಲ್ಲಿಸಿದರೆ ಬದಲಾವಣೆಗೆ ಅವಕಾಶ – ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೋನಾ ಸೋಂಕು ಹೆಚ್ಚು ಕಂಡು ಬಂದ ಬೆಳ್ತಂಗಡಿ ತಾಲೂಕಿನ ಕೆಲ ಗ್ರಾಮಗಳನ್ನು ಸೀಲ್ ಮಾಡಲಾಗಿದೆ. ಆದರೆ ಪೂರ್ತಿ ಗ್ರಾಮಗಳ ಬದಲು ಸೋಂಕು ಕಂಡು ಬಂದ ಪ್ರದೇಶವನ್ನು ಮಾತ್ರ ಸೀಲ್ ಡೌನ್ ಮಾಡಲು ಸ್ಥಳೀಯ ಗ್ರಾಮ ಪಂಚಾಯತು ಆಡಳಿತ ಪ್ರಸ್ತಾವನೆನ್ನು ಇ.ಒ ಹಾಗೂ ತಹಶೀಲ್ದಾರಿಗೆ ಕೊಟ್ಟರೆ ಅದನ್ನು ಪರಿಶೀಲಿಸಿ, ಬದಲಾವಣೆಗೆ ಅವಕಾಶ ಮಾಡಲು ಸೂಚಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಹೇಳಿದರು.
ಅವರು ಜೂ.14ರಂದು ಬೆಳ್ತಂಗಡಿ ಎಸ್.ಡಿ.ಎಂ ಸಭಾಂಗಣದಲ್ಲಿ ತಾಲೂಕಿನಲ್ಲಿ ಕೋವಿಡ್-19ರ ಸೋಂಕು ನಿವಾರಣೆ ಮಾಡುವ ನಿಟ್ಟಿನಲ್ಲಿ ತಾಲೂಕಿನ ಅಧಿಕಾರಿಗಳ ಸಭೆಯನ್ನು ನಡೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ನೆರಿಯ ಗ್ರಾಮವನ್ನು ಸಹ ಸೀಲ್‌ಡೌನ್ ಮಾಡಲಾಗಿತ್ತು. ಆದರೆ ಇಲ್ಲಿ ಸಿಯೋನ್ ಆಶ್ರಮದಲ್ಲಿ ಮಾತ್ರ ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ಇಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಪರಿಶೀಲನೆ ನಡೆಸಿ, ಪೂರ್ತಿ ಗ್ರಾಮದ ಬದಲು ಸಿಯೋನ್ ಆಶ್ರಮ ಪ್ರದೇಶವನ್ನು ಮಾತ್ರ ಸೀಲ್‌ಡೌನ್ ಸೀಲ್ ಮಾಡಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು. ಈ ರೀತಿ ಮಾಡಬೇಕಾದರೆ ಗ್ರಾ.ಪಂ ಕಾರ್ಯಪಡೆ ಪ್ರಸ್ತಾವನೆ ಕೊಡಬೇಕು ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಕೊರೋನಾ ಸೋಂಕು ಕಡಿಮೆಯಾಗಿದ್ದು, ಪಾಸಿವಿಟಿ ರೇಟ್ ಜಾಸ್ತಿಯಾಗುತ್ತಿದ್ದು, ಇದನ್ನು ಕಡಿಮೆ ಮಾಡಲು ಶಾಸಕರ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಶೇ 24 ಪಾಸಿವಿಟಿ ರೇಟ್ ಇದ್ದದ್ದು, ಈಗ ಶೇ 13ಕ್ಕೆ ಇಳಿದಿದೆ. ಇನ್ನೂ ಕೂಡು ಕಡಿಮೆ ಮಾಡಲು ಸೋಂಕು ಪತ್ತೆ ಹಚ್ಚಲು ಏನು ಕ್ರಮ ಮಾಡಬೇಕು ಎಂದು ಚರ್ಚೆ ನಡೆದಿದೆ. ಇನ್ನಷ್ಟು ಟೆಸ್ಟ್ ಹೆಚ್ಚಿಸಿದರೆ ಸೋಂಕು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮೊದಲು ಸೋಂಕಿತರ ರ್‍ಯಾಟ್ ಟೆಸ್ಟ್ ಮಾಡಿ ನಂತರ ಆರ್ಟಿಪಿಸಿಯಲ್ ಟೆಸ್ಟ್ ಆಗುತ್ತಿದೆ. ಜಿಲ್ಲೆಯಲ್ಲಿ ರ್‍ಯಾಟ್ ಟೆಸ್ಟ್‌ನ್ನು ಹೆಚ್ಚು ಮಾಡುತ್ತೇವೆ. ಬೆಳ್ತಂಗಡಿ ತಾಲೂಕಿನಲ್ಲಿಯೂ ಪಾಸಿಟಿವಿಟಿ ರೇಟ್ ದಿನೇ ದಿನೇ ಕಡಿಮೆಯಾಗುತ್ತಿದೆ.ಬೆಳ್ತಂಗಡಿ ತಾಲೂಕು ಪಶ್ಚಿಮ ಘಟದಲ್ಲಿ ತಪ್ಪಲಲ್ಲಿದ್ದು, ಹಾಲು ಉತ್ಪಾದಕರ ಸಂಘ, ಅಂಗಡಿಗಳಲ್ಲಿ ಹೆಚ್ಚು ಜನರು ಸೇರುತ್ತಿರುವುದರಿಂದ ಇಂತಹ ಪ್ರದೇಶಗಳ ಮೇಲೆ ನಿಗಾ ವಹಿಸಬೇಕಾಗಿದೆ. ಕೊರೋನಾ ಸೋಂಕಿತರನ್ನು ಗುರುತಿಸಿ, ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಬೇಕು ಅಲ್ಲಿ ಸರಕಾರದ ವತಿಯಿಂದ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಾಸಕ ಹರೀಶ್ ಪೂಂಜರವರು ಮಾತನಾಡಿ, ತಾಲೂಕಿನ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸೋಂಕು ಕಡಿಮೆ ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆಗಳಾಗಿದ್ದು, ತಾಲೂಕಿನ 8 ಜಿ.ಪಂ ಕ್ಷೇತ್ರದಲ್ಲೂ ಟೆಸ್ಟ್‌ಕಾರ್ಯ ನಡೆಯುತ್ತಿದೆ. ಕೊರೋನಾ ರ್‍ಯಾಂಡಮ್ ಟೆಸ್ಟ್ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತಾಲೂಕಿನ ಕೆಲ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಇಲ್ಲಿ ಪತ್ರಿಕೆ ವಿತರಣೆ, ಹಾಲು ಸಂಗ್ರಹ ಹಾಗೂ ಮೆಡಿಕಲ್‌ಗೆ ಯಾವುದೇ ನಿರ್ಬಂಧ ಇಲ್ಲ ಎಂದು ಸ್ವಷ್ಟಪಡಿಸಿದರು. ಸಿಯೋನ್ ಆಶ್ರದಲ್ಲಿ 202 ಮಂದಿಗೆ ಪಾಸಿಟೀವ್ ಬಂದಿದ್ದು, ಜೂ.20ಕ್ಕೆ 15 ದಿನಗಳ ಕ್ವಾರಂಟೈನ್ ಅವಧಿ ಮುಗಿಯುತ್ತದೆ. ನಂತರ ಎಲ್ಲರನ್ನೂ ಮತ್ತೆ ಆಶ್ರಮಕ್ಕೆ ಕರೆತರಲಾಗುವುದು ಎಂದು ತಿಳಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.