ಬೆಳ್ತಂಗಡಿ ಸುವರ್ಣ ಪ್ರಿಂಟರ್ಸ್ ಮಾಲಕ ಗಣೇಶ್ ಸುವರ್ಣ ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುವೆಟ್ಟು: ಹಲವಾರು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಸುವರ್ಣ ಪ್ರಿಂಟರ್ಸ್ ಮಾಲಕ ಗಣೇಶ್ ಸುವರ್ಣ(55.ವ) ರವರು ಇಂದು(ಜೂ.14) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಮುಂಜಾನೆ ಗಣೇಶ್ ಸುವರ್ಣ ರವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಆ ಕೂಡಲೇ ಅವರನ್ನು ಗುರುವಾಯನಕೆರೆಯ ಅಭಯ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಗಣೇಶ್ ಸುವರ್ಣರವರು ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಇವರು ಕುವೆಟ್ಟು ಗ್ರಾಮದ ಕುವೆಟ್ಟು ಶಾಲೆಯ ಬಳಿ ವಾಸ್ತವ್ಯವಿದ್ದು, ಇವರ ಪತ್ನಿ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ಮೃತರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.