ಕುವೆಟ್ಟು: ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುವೆಟ್ಟು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕುವೆಟ್ಟು ಹಾಗು ಓಡಿಲ್ನಾಳ ಗ್ರಾಮ ಸಮಿತಿಯ ನೇತ್ರತ್ವದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಸಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಜೂ.14ರಂದು ಕುವೆಟ್ಟು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ಮಾತನಾಡಿ  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಲೀ. ಪೆಟ್ರೋಲ್ ಗೆ 35 ರೂ.ಆಗಿದ್ದು,  ಕೇಂದ್ರ ಮತ್ತು ರಾಜ್ಯ ಸರ್ಕಾರ ತೆರಿಗೆ ರೂಪದಲ್ಲಿ 65 ರೂ. ಸೇರಿಸಿ 100 ರೂ. ಮಾರಾಟ ಮಾಡುತ್ತಿರುವುದು ಹಗಲು ದರೋಡೆ ಆಗಿದೆ.

ಕೊರೊನಾದಂತಹ  ಈ ಸಂಕಷ್ಟದ ಸಮಯದಲ್ಲಿ ಜನರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರೂ, ನಿರ್ದಾಕ್ಷಿಣ್ಯವಾಗಿ ಪೆಟ್ರೋಲ್, ಗ್ಯಾಸ್ ಸೇರಿದಂತೆ ಇತರೆ ದಿನ ಬಳಕೆಯ ಸಾಮಾಗ್ರಿಗಳ ಬೆಲೆ ಏರಿಸಿರುವ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಬಿಜೆಪಿ ಸರಕಾರದ ಧೋರಣೆಯನ್ನು ಕಟುವಾಗಿ ಖಂಡಿಸಿದರು.

ಈ ಸಭೆಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ಗ್ರಾಮೀಣ) ಅಧ್ಯಕ್ಷ  ರಂಜನ್ ಜಿ. ಗೌಡ,  ಜಿ.ಪಂ. ಮಾಜಿ ಸದಸ್ಯ ಶೇಖರ ಕುಕ್ಕೇಡಿ ಹಾಗೂ ತಾ. ಪಂ. ಸದಸ್ಯ ಗೋಪಿನಾಥ್ ನಾಯಕ್, ಬೆಳ್ತಂಗಡಿ ತಾಲೂಕು ಎಸ್.ಸಿ ಘಟಕದ ಅಧ್ಯಕ್ಷ ವಸಂತ ಬಿ.ಕೆ, ಬೆಳ್ತಂಗಡಿ ಎ.ಪಿ ಎಂ.ಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಪ್ರಭಾಕರ ಎಸ್, ಬೆಳ್ತಂಗಡಿ ಯುವ ಇಂಟಕ್ ಅಧ್ಯಕ್ಷ  ಅನೂಪ್ ಎಂ. ಬಂಗೇರ, ರಫೀಕ್ ಜಿ. ಕೆರೆ,ಮಹಮ್ಮದ್ ರಾಝಿಯುದ್ದಿನ್ ಸಪರಬೈಲು, ಬದ್ರುದ್ದಿನ್ ಮದ್ದಡ್ಕ, ಸಿರಾಜ್ ಚಿಲಿಂಬಿ, ಕುವೆಟ್ಟು ಪಂಚಾಯತ್ ಮಾಜಿ ಸದಸ್ಯ ರಿಯಾಜ್ ಅಹಮದ್ ಸಿರಾಜ್ ಪಾಡ್ಯರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ಕೆ. ಸಲೀಂ ಸ್ವಾಗತಿಸಿ ಉಮರಬ್ಬ ಮದ್ದಡ್ಕ ಧನ್ಯವಾದ ಸಲ್ಲಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.