ಲಾಕ್​ಡೌನ್​ ಸಮಯದ ಸದುಪಯೋಗ: ರಸ್ತೆ ದುರಸ್ತಿಗೊಳಿಸಿ ಮಾದರಿಯಾದ ಬಳಂಜ ಸ್ಥಳೀಯರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ: ಮಹಾಮಾರಿ ಕೊರೊನಾ ನಿಯಂತ್ರಿಸಲು ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿದ್ದು, ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು ಎಂಬ ನಿಬಂಧನೆ ವಿಧಿಸಲಾಗಿದೆ.

ಇದೀಗ ಸರ್ಕಾರದ ಈ ನಿಯಮವನ್ನು ಬೆಳ್ತಂಗಡಿ ತಾಲೂಕಿನ ಬಳಂಜದ ಪರಾರಿ ಗ್ರಾಮಸ್ಥರು ಚಾಚು ತಪ್ಪದೆ ಪಾಲಿಸುತ್ತಿದ್ದು, ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡಿದೆ.

ಬಳಂಜ ಗ್ರಾಮದ ಕಡೆಂಗಾಲ್ ಬೊಟ್ಟುದಡ್ಡ ರಸ್ತೆಯಿಂದ ಜಾರಿಗೆದಡಿಯಿಂದ ಪಾಡಿಮನೆಯವರಿಗೆ ಶ್ರಮದಾನ ಮಾಡುವ ಮೂಲಕ ದುರಸ್ತಿಗೊಳಿಸಿದ್ದು, ಸುತ್ತಮುತ್ತ ಬೆಳೆದಿದ್ದ ಅನಗತ್ಯ ಗಿಡ ಪೊದೆಗಳನ್ನು ತೆರವುಗೊಳಿಸಿದ್ದಾರೆ.

ಸ್ಥಳೀಯರಾದ ಪ್ರವೀಣ್ ಕುಮಾರ್ ಎಚ್.ಎಸ್, ಕೇಶವ ಪೂಜಾರಿ ಮಜ್ಜೆನಿ, ಅಣ್ಣಿ ಪೂಜಾರಿ ಪಾಡಿ ಮನೆ, ಧರ್ಣಪ್ಪ ಪೂಜಾರಿ ಗುಂಡಿದಡ್ಡ, ಕರಿಯ ಪೂಜಾರಿ ಪಾಡಿಮನೆ, ಸಂಜೀವ ಪೂಜಾರಿ ಕಿನ್ನರ್ ದಡ್ಡ, ವಸಂತ ಪೂಜಾರಿ ಗೊಬ್ಬರ ಗುಡ್ಡೆ,  ರಂಜಿತ್ ಎಚ್.ಡಿ ಸುಧಾಮ, ರತ್ನಾಕರ ಪೂಜಾರಿ ಮಜ್ಜಿನಿ, ಹರೀಶ್ ಪೂಜಾರಿ ಮಜ್ಜೆನಿ, ದೀಪಕ್ ಎಚ್. ಡಿ ಸಂಧ್ಯಾದೀಪ, ಜತಿನ್ ಕುಮಾರ್, ಮುರಳಿ ಪೂಜಾರಿ ಪಾಡಿ ಮನೆ,  ಧರಣೇಂದ್ರ ಕುಮಾರ್, ಪ್ರೀತೆಶ್ ಬರಮೇಲು ಶ್ರಮದಾನದಲ್ಲಿ ಪಾಲ್ಗೊಂಡು ಮಾದರಿಯಾಗಿದ್ದಾರೆ.

 

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.