ಲಾಯಿಲ: ಗ್ರಾ.ಪಂ ಸದಸ್ಯರಿದಂದ ಚಿಕಿತ್ಸಾ ಸಹಾಯಾರ್ಥವಾಗಿ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಇಲ್ಲಿನ ಗ್ರಾಮದ ಕಾಶಿಬೆಟ್ಟು ಎಂಬಲ್ಲಿನ ನಿವಾಸಿ ಕಮಲಾಕ್ಷ ಅವರ ಪುತ್ರ ಸಂದೀಪ್ (30ವ.) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಕಮಲಾಕ್ಷ ಅವರ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು, ಈಗಾಗಲೇ ಮಗನ ಚಿಕಿತ್ಸೆಗಾಗಿ ಸುಮಾರು ಮೂರುವರೆ ಲಕ್ಷ ವ್ಯಯಿಸಿದ್ದಾರೆ.  ಅಲ್ಲದೇ ಮುಂದಿನ ಚಿಕಿತ್ಸೆ ಮತ್ತಷ್ಟು ಹಣದ ಅಗತ್ಯವಿದ್ದು, ಮೊದಲೇ ಸಂಕಷ್ಟದಿಂದಲ್ಲಿಯೇ ಇರುವ  ಕಮಲಾಕ್ಷ ಅವರಿಗೆ ಚಿಕಿತ್ಸೆಗಾಗಿ ಹಣ ಹೊಂದಿಸುವುದು ಕಷ್ಟ ಸಾಧ್ಯವಾಗಿದೆ.

ಈ ಹಿನ್ನಲೆಯಲ್ಲಿ  ಸಂದೀಪ್  ಅವರ ಚಿಕಿತ್ಸೆಗೆ ನೆರವಾಗುವ ದೃಷ್ಟಿಯಿಂದ ಲಾಯಿಲ ಪಂಚಾಯತ್ ಸದಸ್ಯರು ಮುಂದೆ ಬಂದಿದ್ದು, ದಾನಿಗಳನ್ನು ಸಂಪರ್ಕಿಸಿ 26ಸಾವಿರ ರೂ.ಗಳನ್ನು ಸಂಗ್ರಹಿಸಿ  ಚಿಕಿತ್ಸಾ ಸಹಾಯರ್ಥಾವಾಗಿ ನೀಡಿದ್ದಾರೆ.

ಲಾಯಿಲ ಪಂ. ಸದಸ್ಯೆ ಸವಿತಾ ಶೆಟ್ಟಿ ಅವರ ನೇತೃತ್ವದಲ್ಲಿ ಈ ನೆರವಿನ ಕಾರ್ಯ ನಡೆದಿದ್ದು, ಸದಸ್ಯರಾದ ಆಶಲತಾ, ಸುಗಂದಿ ಜಗನ್ನಾಥ, ಹಾಗೂ ನೇತ್ರ ಶಶಿಕುಮಾರ್ ಮತ್ತು ಅನಿಲ್ ಕಕ್ಕೇನ ದಾನಿಗಳನ್ನು ಸಂಪರ್ಕಿಸಿ ಹಣವನ್ನು ಸಂಗ್ರಹಿಸುವಲ್ಲಿ ಶ್ರಮಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.