ಗ್ಯಾರೇಜ್ ಹಾಗೂ ಕನ್ನಡಕದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ ದ.ಕ ಜಿಲ್ಲಾಧಿಕಾರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದ.ಕ ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೂ.21ರವರೆಗೆ ಲಾಕ್ ಡೌನ್ ಅವಧಿಯನ್ನು ವಿಸ್ತರಿಸಲಾಗಿದ್ದು, ವಾಹನ ಶೋ ರೂಂ ಹೊರತುಪಡಿಸಿ ಉಳಿದ ಎಲ್ಲಾ ಗ್ಯಾರೇಜುಗಳು, ಅಧಿಕೃತ ವಾಹನ ಸೇವಾ ಕೇಂದ್ರಗಳು ಹಾಗೂ ಕನ್ನಡಕದ ಅಂಗಡಿಗಳನ್ನು ತೆರೆಯಲು ದ.ಕ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆವಿ ರವರು ಆದೇಶ ನೀಡಿದ್ದಾರೆ.

ಕೋವಿಡ್ ಮುಂಜಾಗ್ರತಾ ಕ್ರಮಗಳ ಪಾಲನೆಯೊಂದಿಗೆ ಬೆಳಿಗ್ಗೆ 6.ರಿಂದ ಮಧ್ಯಾಹ್ನ 12 ರ ವರೆಗೆ  ವಾಹನಗಳ ದುರಸ್ಥಿಗೆ ಅತೀ ಅವಶ್ಯಕವಾಗಿರುವಂತಹ   ಎಲ್ಲಾ ಗ್ಯಾರೇಜುಗಳನ್ನು ತೆರೆಯಲು ಹಾಗೂ ಅಧಿಕೃತ ವಾಹನ ಸೇವಾ ಕೇಂದ್ರಗಳು  ಮತ್ತು ಕನ್ನಡಕದ ಅಂಗಡಿಗಳನ್ನು ತೆರೆಯಲು ಜಿಲ್ಲಾಧಿಕಾರಿಯವರು ಆದೇಶ ನೀಡಿದ್ದಾರೆ.

ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರೊಂದಿಗೆ ಜೂ.1ರಂದು ಸುದ್ದಿ ನ್ಯೂಸ್ ಚಾನೆಲ್ ವತಿಯಿಂದ ನಡೆದ ‘ಸುದ್ದಿ ಸಂವಾದ’ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಗ್ಯಾರೇಜ್ ಮಾಲಕರು ಕೋವಿಡ್ ನಿಯಮ ಪಾಲನೆಯೊಂದಿಗೆ ಗ್ಯಾರೇಜ್‌ಗಳ ತೆರೆಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು. ಮನುಷ್ಯರಿಗೆ ವೈದ್ಯರಿದ್ದಂತೆ ವಾಹನಗಳ ದುರಸ್ತಿಗೆ ಗ್ಯಾರೇಜ್ ಮುಖ್ಯ ಎಂಬ ಅಭಿಪ್ರಾಯ ಬಂದಿತ್ತು. ಇದು ಸುದ್ದಿ ಕೇಬಲ್ ಚಾನೆಲ್, ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲಿ ಪ್ರಸಾರಗೊಂಡಿತ್ತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.