ಅರ್ಚಕರು, ಅಡುಗೆ ಭಟ್ಟರು ಹಾಗೂ ಸಿಬ್ಬಂದಿಗಳಿಗೆ ಧನ ಸಹಾಯ: ತಾಲೂಕಿನ 40 ‘ಸಿ’ ದೇವಾಲಯಗಳ ನೂರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೋವಿಡ್-19 ಪ್ರಯುಕ್ತ ಧಾರ್ಮಿಕ ದತ್ತಿ ಇಲಾಖೆಯ ಸಮೂಹ ‘ಸಿ’ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು, ಅಡುಗೆ ಭಟ್ಟರು ಹಾಗೂ ಸಿಬ್ಬಂದಿಗಳಿಗೆ ತಲಾ 3ಸಾವಿರ ರೂ.ಗಳಂತೆ ಧನ ಸಹಾಯವನ್ನು ಸರಕಾರ ಘೋಷಿಸಿದೆ.

ಆ ಹಿನ್ನಲೆಯಲ್ಲಿ ತಾಲೂಕಿನ 40 ‘ಸಿ’ ದೇವಾಲಯಗಳ ಸುಮಾರು ನೂರಕ್ಕೂ ಹೆಚ್ಚು ಅರ್ಜಿಗಳನ್ನು ಶುಕ್ರವಾರ ಶ್ರಮಿಕದಲ್ಲಿ ಶಾಸಕ ಹರೀಶ ಪೂಂಜ ಅವರ ಸಮ್ಮುಖದಲ್ಲಿ ದ.ಕ.ಜಿಲ್ಲಾ ಧಾರ್ಮಿಕ‌ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರಿಗೆ ಸಲ್ಲಿಸಲಾಯಿತು.

ಈ ಸಂದರ್ಭ ಬಿಜಿಪಿ ಮಂಡಲಾಧ್ಯಕ್ಷ ಜಯಂತ ಕೋಟ್ಯಾನ್, ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದ ಆಡಳಿತೆ ಮೊಕ್ತೇಸರ ಬಿ.ಕೆ.ಧನಂಜಯರಾವ್, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ ಗೇರುಕಟ್ಟೆ ಹಾಗೂ ವಿವಿಧ ದೇವಾಲಯಗಳ ಅರ್ಚಕ, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.