ಧರ್ಮಸ್ಥಳ: ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ಗ್ರಾಮಾಭಿವೃದ್ಧಿ ಯೋಜನೆ ವೆಂಟಿಲೇಟರ್ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಕೋವಿಡ್  ವಿರುದ್ಧದ ಹೋರಾಟದಲ್ಲಿ  ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಅಗಾಧ ಮಟ್ಟದ ಕೊಡುಗೆ ನೀಡುತ್ತಿದ್ದು,  ಸೋಂಕಿತರಿಗೆ ವಿವಿಧ ರೀತಿಯಲ್ಲಿ ನೆರವು ನೀಡುತ್ತಿದ್ದಾರೆ.

ಕೋವಿಡ್ ಸೋಂಕಿತರ ಚಿಕಿತ್ಸೆಗೆ ತೆರಳಲು ಉಚಿತ ವಾಹನದ ವ್ಯವಸ್ಥೆ, ವಿವಿಧ ಆಸ್ಪತ್ರೆಗಳಿಗೆ ಆಕ್ಷಿಜನ್ ಹಾಗೂ ವೈದ್ಯಕೀಯ ಸಲಕರಣೆಗಳ ಕೊಡುಗೆ, ಕೋವಿಡ್ ಸೆಂಟರ್‌ನಲ್ಲಿ ಉಚಿತ ಊಟದ ವ್ಯವಸ್ಥೆ ಸೇರಿದಂತೆ ಸುಮಾರು 5 ಕೋಟಿ ರೂ.ಗಳನ್ನು ಕೋವಿಡ್ ಸಂಬಂಧಿತ ಕಾರ್ಯಕ್ರಮಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವ್ಯಯಿಸಲಾಗಿದೆ.

ಇದೀಗ ಉಜಿರೆ ಎಸ್.ಡಿ.ಎಂ ಆಸ್ಪತ್ರೆಗೆ ಪೂಜ್ಯ ಖಾವಂದರರ ಮಾರ್ಗದರ್ಶನದಂತೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಜೂ.10ರಂದು ಉಚಿತವಾಗಿ ಎರಡು ವೆಂಟಿಲೇಟರ್ ಹಸ್ತಾಂತರಿಸಿದ್ದು,  ತಾಲೂಕಿನ ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸಿಕೊಡುವ ಕಾರ್ಯದಲ್ಲಿ ನಿರತವಾಗಿದೆ.

ಈ ವೇಳೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ| ರಂಜನ್ ಕುಮಾರ್, ವೈದ್ಯರುಗಳಾದ ಡಾ| ಸಾತ್ವಿಕ್ ಜೈನ್, ಡಾ| ತೇಜಸ್ವಿನಿ ಕೋಟ್ಯಾನ್ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಓ.ಓ ಅನಿಲ್ ಕುಮಾರ್ ಎಸ್.ಎಸ್ ಉಪಸ್ಥಿತರಿದ್ದರು. ಆಸ್ಪತ್ರೆಯ ನಿರ್ದೇಶಕ ಎಂ.ಜನಾರ್ಧನ್ ಸ್ವಾಗತಿಸಿ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಗೀತ ಧನ್ಯವಾದ ಅರ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.