ಪ್ರತೀ ಲೀಟರ್ ಹಾಲಿನ ಮೇಲೆ 1 ರೂ.ದರ ಹೆಚ್ಚಿಸಿದ ತಣ್ಣೀರುಪಂತ ಹಾ.ಉ.ಸ.ಸಂಘ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತಣ್ಣೀರುಪಂತ: ಇಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘ ಕಳೆದ 2020-21ನೇ ವರ್ಷದಲ್ಲಿ ಹಾಲು ಪೂರೈಕೆ ಮಾಡಿದ ಎಲ್ಲಾ ಸದಸ್ಯರುಗಳಿಗೆ ಪ್ರತೀ ಲೀಟರ್ ಹಾಲಿನ ಮೇಲೆ 1 ರೂ. ಹೆಚ್ಚುವರಿ ದರ ನೀಡಲು ಸಂಘದ ಆಡಳಿತ ಮಂಡಳಿ ನಿರ್ಧರಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಬಿ. ನಿರಂಜನ್ ತಿಳಿಸಿರುತ್ತಾರೆ.

ಕಳೆದ 2020-21ನೇ ಸಾಲಿನಲ್ಲಿ ಒಟ್ಟು 772 ಸದಸ್ಯರು ಪೂರೈಸಿದ ಹಾಲಿಗೆ ಒಟ್ಟು 19,62,598.10 ರೂ.ಗಳನ್ನು ಸದಸ್ಯರಿಗೆ ಬಟಾವಡೆ ಮಾಡಿರುತ್ತಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕೃಷಿಕರಿಗೆ ತಮ್ಮಲ್ಲಿರುವ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅಸಾಧ್ಯವಾಗಿದ್ದು, ಹೈನುಗಾರರಿಗೆ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಈ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಾಗೇ ಕೊರೊನಾದಿಂದ ಹಾಗೂ ಬ್ಲ್ಯಾಕ್ ಫಂಗಸ್ ನಿಂದ ಮೃತಪಟ್ಟ 2 ಕುಟುಂಬಗಳಿಗೆ ಸಂಘದ ಸದಸ್ಯರ ಕ್ಷೇಮ ನಿಧಿಯಿಂದ ಸಹಾಯಧನ ನೀಡಿದ್ದು, ಸಂಘದ ಎಲ್ಲಾ ಸಿಬ್ಬಂದಿಗಳಿಗೂ ಆರ್ಥಿಕ ಪ್ರೋತ್ಸಾಹಧನ ನೀಡಲಾಗಿದೆ.

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಪ್ರಸ್ತುತ ದಿನವಾರು ೬೬೫೩ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಪ್ರತಿ ತಿಂಗಳು 62 ಲಕ್ಷ ರೂ.ಗಳಷ್ಟು ಸದಸ್ಯರಿಗೆ ಬಟವಾಡೆಯಾಗುತ್ತಿದೆ.
ಕಳೆದ ಸಾಲಿನಲ್ಲಿಯೂ ಇದೇ ರೀತಿ ಸುಮಾರು 19,36,738/- ರೂ.ಗಳನ್ನು ಸದಸ್ಯರಿಗೆ ಸಹಾಯಧನ ನೀಡಿದ್ದು, 39.24ಲಕ್ಷ.ರೂ ಗಳನ್ನು ನಿವ್ವಳ ಲಾಭ ಗಳಿಸಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.