ಕುವೆಟ್ಟು: ಕೋವಿಡ್ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರ ಮನವೊಲಿಸಿದ ತಹಶೀಲ್ದಾರರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುವೆಟ್ಟು: ವೈದ್ಯರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ವೈದ್ಯರ ನಡೆ ಹಳ್ಳಿಯ ಕಡೆ ಅಭಿಯಾನ ನಡೆಯುತ್ತಿದ್ದು,  ಕೋವಿಡ್ ಪ್ರಕರಣಗಳು ದಾಖಲಾಗಿರುವ ಕುವೆಟ್ಟು ಪಿಲಿಚಂಡಿಕಲ್ಲು ಪ್ರದೇಶಕ್ಕೆ  ಜೂ.9ರಂದು ವೈದ್ಯರು ಭೇಟಿ ನೀಡಿದ್ದಾರೆ.

ಆದರೆ ಅಲ್ಲಿನ ನಿವಾಸಿಗಳು ತಪಾಸಣೆಗೆ ಒಳಗಾಗಲು ಹಿಂದೇಟು ಹಾಕಿದ್ದು, ಕೋವಿಡ್ ಪರೀಕ್ಷೆ ನಡೆಸದಂತೆ ತಾಕೀತು ಮಾಡಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ ಮಹೇಶ್ ಜೆ ಅವರು ಭೇಟಿ ಪಿಲಿಚಂಡಿಕಲ್ಲು ಪ್ರದೇಶಕ್ಕೆ ನೀಡಿದ್ದು, ಪರೀಕ್ಷೆ ಮಾಡಿಸಿಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸಿದ್ದಾರೆ.

ಬಳಿಕ ಬೆಳ್ತಂಗಡಿ ಪೋಲಿಸ್ ಠಾಣೆಯ ಠಾಣಾಧಿಕಾರಿ ನಂದಕುಮಾರ್ ಹಾಗೂ ಠಾಣೆಯ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಡಿಪಿ, ಗ್ರಾಮಕರಣಿಕರಾದ ನಾರಾಯಣ್ ಕುಲಾಲ್, ಪಂಚಾಯತ್ ನ ಅಧ್ಯಕ್ಷೆ ಆಶಾಲತಾ, ಪಂಚಾಯತ್ ಸದಸ್ಯ ಸಮೀಮುಲ್ಲಾ, ಫಾದರ್ ಮುಲ್ಲರ್ ಹಾಸ್ಪಿಟಲ್ ಮಂಗಳೂರು ಇಲ್ಲಿಯ ವೈದ್ಯಾಧಿಕಾರಿ ತಂಡ, ಕುವೆಟ್ಟು ಗ್ರಾಮದ ಆರೋಗ್ಯ ಸಹಾಯಕಿ ಪ್ರೀತಿ, ಆಶಾ ಕಾರ್ಯಕರ್ತೆಯರು, ಸ್ಥಳೀಯ ಖಲಂದರ್ , ಪಂಚಾಯತ್ ಸಿಬ್ಬಂದಿ ಉಪಸ್ಥಿತಿಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.