ಉಜಿರೆ: ಸಂತ ಅಂತೋನಿ ಚರ್ಚ್ ವತಿಯಿಂದ 40 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಉಜಿರೆ: ಇಲ್ಲಿನ ಸಂತ ಅಂತೋನಿ ಚರ್ಚ್ ಮತ್ತು ಮಂಗಳೂರು ಎಲೋಷಿಯಸ್ ಕಾಲೇಜು ಸಹಯೋಗದಲ್ಲಿ ಉಜಿರೆ ಚರ್ಚ್ ವ್ಯಾಪ್ತಿಯ ಬಡ ಕುಟುಂಬಗಳಿಗೆ ಜೂ.9ರಂದು ಚರ್ಚ್ ವಠಾರದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಯಿತು.

ಕೋವಿಡ್ ಲಾಕ್‌ಡೌನ್‌ನಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಬಡ ಕುಟುಂಬಗಳಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಕಿಟ್ ವಿತರಣೆ ಮಾಡಲಾಗಿದ್ದು, 40 ಬಡ ಕುಟುಂಬಗಳಿಗೆ ಆಹಾರ ಕಿಟ್ ನೀಡಲಾಯಿತು.

ಈ ಸಂದರ್ಭದಲ್ಲಿ ಉಜಿರೆ ಸಂತ ಅಂತೋನಿ ಚರ್ಚ್ ನ ಧರ್ಮಗುರುಗಳಾದ ವಂ.ಫಾ| ಜೇಮ್ಸ್ ಡಿ’ಸೋಜ, ಮಂಗಳೂರು ಎಲೋಷಿಯಸ್ ಕಾಲೇಜಿನ ನಿರ್ದೇಶಕರು ವಂ,ಫಾ| ಮೆಲ್ವಿನ್ ಪಿಂಟೊ, ವಂ,ಫಾ| ಸಿರಿಲ್ ಡಿ’ಮೆಲ್ಲೋ, ವಂ.ಫಾ| ರೋಯ್‌ಸ್ಟಾನ್ ಮಾಡ್ತಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟಿನಿ ಫೆರ್ನಾಂಡಿಸ್, ಕಾರ್ಯದರ್ಶಿ ನಿತಿನ್ ಮೊನೀಸ್, ವಾಳೆಯ ಗುರಿಗಾರರು ಹಾಗೂ ಸಂತ್ರಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.