ಮಡಂತ್ಯಾರು : ರಾಸುಗಳ ವಿಮಾ ಯೋಜನೆಗೆ ಚಾಲನೆ

ಮಡಂತ್ಯಾರು: ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವ್ಯಾಪಿಯ ಎಲ್ಲಾ ಸದಸ್ಯರುಗಳ ರಾಸುಗಳಿಗೆ 2021-22 ನೇ ಸಾಲಿನ ಹೊಸ ವಿಮೆಯನ್ನು ಮಾಡುವ ಅಭಿಯಾನಕ್ಕೆ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಮುಗೆರೋಡಿಯವರು ಚಾಲನೆ ನೀಡಿದರು.
ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯ ಸಂಘಗಳ ಹಾಲು ಉತ್ಪಾದಕರ ಸದಸ್ಯರುಗಳ ರಾಸುಗಳು ಮರಣ ಹೊಂದಿದ ಸಂದರ್ಭದಲ್ಲಿ ಹೈನುಗಾರರಿಗೆ ಆರ್ಥಿಕ ನಷ್ಟವಾಗುತ್ತಿದ್ದು, ಇದರಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ ಹಾಗೂ ಹೈನುಗಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಒಕ್ಕೂಟವು ಪ್ರತಿ ಸದಸ್ಯರುಗಳ ರಾಸುಗಳಿಗೆ ಶೇ.75 ರಿಯಾಯಿತಿಯಲ್ಲಿ ವಿಮೆ ಮಾಡಲು ತೀರ್ಮಾನಿಸಿದ್ದು, ಇದರಂತೆ ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವ್ಯಾಪ್ತಿಯ ಪ್ರತಿ ಸದಸ್ಯರುಗಳ ಮನೆಮನೆಗಳಿಗೆ ಆಯಾಯ ವ್ಯಾಪ್ತಿಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ತೆರಳಿ ವಿಮೆಯನ್ನು ಮಾಡುವುದರ ಮುಖಾಂತರ ಚಾಲನೆ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಎಂ. ರಾಮಕೃಷ್ಣ ಹೆಬ್ಬಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಬಾಲಕೃಷ್ಣ, ಹರಿಪ್ರಸಾದ್ ಶೆಟ್ಟಿ ಪದೆಂಜಿಲ, ಸಂಜೀವ ಶೆಟ್ಟಿ ಉರೆಸಾಗು, ರವಿರಾಜ್ ಶೆಟ್ಟಿ ಪಾತಿಲ, ಕಾಂತಪ್ಪ ಗೌಡ ಹಟ್ಟತ್ತೋಡಿ, ಎಂ. ಮಂಜಯ್ಯ ಶೆಟ್ಟಿ ಮೂಡಬೆಟ್ಟು, ಪುರುಷೋತ್ತಮ ನಡಿಬೆಟ್ಟು, ಅಶೋಕ್ ಕುಮಾರ್ ಬಸವನಗುಡಿ, ಅಗ್ನೇಸ್ ಫ್ರಾಂಕ್ ಬರ್ನ, ಸೌಮ್ಯ ಅಲೆಕ್ಕಿ, ಗಿರಿಯಪ್ಪ ನಾಯ್ಕ ಒಳಗುಡ್ಡೆ, ವಿಜಯ ಕೋಟೆ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.