ಪಡಂಗಡಿ ಗ್ರಾ.ಪಂ ವ್ಯಾಪ್ತಿಯ 200 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಪಡಂಗಡಿ ಗ್ರಾಮ ಪಂಚಾಯತ್, ಊರ ದಾನಿಗಳು ಹಾಗೂ ಗ್ರಾ.ಪಂ ಸದಸ್ಯ ಸಂತೋಷ್ ಕುಮಾರ್ ಜೈನ್ ರವರ ನೇತೃತ್ವದಲ್ಲಿ ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಗರ್ಡಾಡಿ ಹಾಗೂ ಪಡಂಗಡಿ ಗ್ರಾಮದ 200 ಬಡ ಕುಟುಂಬಗಳಿಗೆ ಜೂ.9 ರಂದು ಆಹಾರ ಕಿಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಉಪಾಧ್ಯಕ್ಷೆ ಕವಿತಾ, ಗ್ರಾ.ಪಂ. ಸದಸ್ಯರು, ಅಭಿವೃದ್ಧಿ ಅಧಿಕಾರಿ ಸಫನ, ಕಾರ್ಯದರ್ಶಿ ತಾರನಾಥ್ ನಾಯ್ಕ್ ಉಪಸ್ಥಿತರಿದ್ದರು.
ಕಳೆದ ಬಾರಿಯ ಲಾಕ್‌ಡೌನ್ ಸಮಯದಲ್ಲೂ ದಾನಿಗಳ ಸಹಕಾರದೊಂದಿಗೆ ಸಂತೋಷ್ ಕುಮಾರ್ ಜೈನ್ ಅವರು ಕೊರೊನಾ ಪಾಸಿಟಿವ್ ಬಂದ ಕುಟುಂಬಗಳಿಗೆ ನೆರವು ನೀಡಿದ್ದರು. ಶಾಲೆಗಳಲ್ಲಿನ ಕ್ವಾರಂಟೈನ್ ಕೇಂದ್ರಗಳಿಗೆ ಆಹಾರ ಹಾಗೂ ಇತರ ಸಾಮಾಗ್ರಿಗಳನ್ನು ವಿತರಣೆ ಮಾಡಿದ್ದರು. ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಸಿದ್ದಗೊಳಿಸಿ ಪ್ಯಾಕೆಟ್ ಮಾಡಿ ಗ್ರಾಮಗ್ರಾಮಗಳಲ್ಲಿ ಅಗತ್ಯವುಳ್ಳವರಿಗೆ ವಿತರಣೆ ಮಾಡಿ ಗಮನ ಸೆಳೆದಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.