ಡಿಕೆಆರ್‌ಡಿಎಸ್ ವತಿಯಿಂದ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಮೆಡಿಕಲ್ ಕಿಟ್ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೋವಿಡ್ ನಿಯಂತ್ರಣಕ್ಕಾಗಿ ಆರೋಗ್ಯ ಕಾರ್ಯಕರ್ತರು ಮಾಡುತ್ತಿರುವ ಸೇವೆ ಶ್ಲಾಘನೀಯವಾದುದು. ಇದು ಸರಕಾರ ಮಟ್ಟದ ಕೆಲಸವಾದರೂ ಫ್ರಂಟ್‌ ಲೈನ್ ಕಾರ್ಯಕರ್ತರು ಮಾಡುತ್ತಿರುವ ಸೇವೆಗೆ ಗೌರವ ನೀಡುತ್ತಿದ್ದೇವೆ. ಆದ್ದರಿಂದ ನಿಮ್ಮ ರಕ್ಷಣೆ ದೃಷ್ಟಿಯಿಂದ ನಾವು ನಿಮಗೆ ಈ ಮೂಲಕ ಆರೋಗ್ಯ ರಕ್ಷೆ ನೀಡುತ್ತಿದ್ದೇವೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.

ಜೂ.8 ರಂದು ಬೆಳ್ತಂಗಡಿ ಬಿಷಪ್ ಹೌಸ್‌ನಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ಸಂಸ್ಥೆ ಡಿಕೆಆರ್‌ಡಿಎಸ್ ಇದರ ವತಿಯಿಂದ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ಸಹಯೋಗದೊಂದಿಗೆ, ಬೆಳ್ತಂಗಡಿ ತಾಲೂಕಿನ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಾಗಿ ತೊಡಗಿಸಿಕೊಂಡಿರುವ‌ ಸರಕಾರಿ ಇಲಾಖೆಗಳಿಗೆ‌ ಹಾಗೂ ಪತ್ರಕರ್ತರಿಗೆ ಮೆಡಿಕಲ್ ಕಿಟ್ ಹಾಗೂ ಎನ್ 95 ಮಾಸ್ಕ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಮುಖ್ಯ‌ ಅತಿಥಿ ಶಾಸಕ ಹರೀಶ್ ಪೂಂಜ ಮಾತನಾಡಿ, ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸರಕಾರಿ‌ ನೌಕರ ಬಂಧುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಧರ್ಮಾಧ್ಯಕ್ಷರ ವತಿಯಿಂದ ಆರೋಗ್ಯ ಕಿಟ್ ವಿತರಿಸಿರುವುದು ಅಭಿನಂದನೀಯ ಎಂದರು.

ಕಾರ್ಯಕ್ರಮದಲ್ಲಿ ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಬಿ. ಮಾನವ ಸ್ಪಂದನ‌ ತಂಡದ‌ ಚೇರ್ಮೆನ್ ಪಿ.ಸಿ ಸೆಬಾಸ್ಟಿಯನ್, ತಾ.‌ಪತ್ರಕರ್ತರ ಸಂಘದ ಅಧ್ಯಕ್ಷ ಅಚುಶ್ರೀ ಬಾಂಗೇರು, ಮೀಡಿಯಾ ಕ್ಲಬ್ ಕಾರ್ಯದರ್ಶಿ ಉಮೇಶ್ ಕುಲಾಲ್, ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾಯಿಲ, ತಾ. ಆರೋಗ್ಯಾಧಿಕಾರಿ‌ ಕಚೇರಿ ವಿಷಯ ನಿರ್ವಾಹಕ ಅಜಯ್ ಕಲ್ಲೆಗ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ‌ ಅಮ್ಮಿ ಸಿಸ್ಟರ್, ಪ.ಪಂ. ಸಮುದಾಯ ಸಂಘಟನಾಧಿಕಾರಿ ಮೆಟಿಲ್ಡಾ, ತಾ.ಪಂ ಪ್ರಭಾರ ವ್ಯವಸ್ಥಾಪಕ ಗಣೇಶ್ ಪೂಜಾರಿ‌ ಉಪಸ್ಥಿತರಿದ್ದರು.

ಕೆಎಸ್‌ಎಮ್‌ಸಿಎ ನಿರ್ದೇಶಕ‌ ಫಾ. ಷಾಜಿ ಮ್ಯಾಥ್ಯೂ ಪ್ರಸ್ತಾವನೆಗೈದು ಸ್ವಾಗತಿಸಿದರು. ಡಿಕೆಆರ್‌ಡಿಎಸ್ ನಿರ್ದೇಶಕ ಫಾ.‌ಬಿನೊಯ್ ಎ.ಜೆ ಕಾರ್ಯಕ್ರಮ ನಿರೂಪಿಸಿದರು. ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ಕೇಪ್ಟನ್ ಅಶ್ರಫ್ ಆಲಿಕುಂಞಿ ಆರೋಗ್ಯ ಕಿಟ್ ವಿವರ ನೀಡಿ ವಂದನಾರ್ಪಣೆಗೈದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.