ಕಳೆಂಜ: ಮನೆಯಿಂದ ಹೊರಹೋದ ವ್ಯಕ್ತಿ ಕೆರೆಯಲ್ಲಿ ಶವವಾಗಿ ಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳೆಂಜ: ಇಲ್ಲಿಯ ಬುಡಾರ ಮನೆ ನಿವಾಸಿ ಪೆರ್ನು ಗೌಡ (48.ವ) ಅವರು ಜೂ.6ರ ಸಂಜೆ ಮನೆಯಿಂದ ಹೊರಹೋದವರು, ಜೂ.7ರ ಮಧ್ಯಾಹ್ನ  ಶವವಾಗಿ ಚಾಕೋಟೆತ್ತಡಿ ಮಹಾಬಲ ಗೌಡ ಅವರಿಗೆ ಸೇರಿದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಜೂ.6ರ ರಾತ್ರಿ ನೆರ ಮನೆಗೆ ಹೋದ ನಂತರ ಮನಗೆ ಹಿಂದಿರುಗಿರಲಿಲ್ಲ. ಜೂ.7ರ ಬೆಳಿಗ್ಗೆ ಮೃತರ ತಂದೆ ಬೂಚ ಗೌಡ ನೆರ ಮನೆಗೆ ಹೋಗಿ ವಿಚಾರಿಸಿದ್ದು, ಅವರು ಮರಳಿ ಅಲ್ಲಿಂದ ಮನೆಗೆ ಹೋಗಿರುವ ವಿಚಾರ ತಿಳಿದು ಬಂದಿದ್ದು, ನಾಪತ್ತೆಯಾದ ವಿಷಯ ಬೆಳಕಿಗೆ ಬಂದಿದೆ.

ಕೂಡಲೇ ಸುತ್ತಮುತ್ತಲಿನ ಪ್ರದೇಶದಲ್ಲಿ ಪೆರ್ನು ಗೌಡ ಅವರಿಗಾಗಿ ಹುಡುಕಾಟ ನಡೆಸಿದ್ದು, ಎಲ್ಲಿಯೂ ಸುಳಿವು ಸಿಕ್ಕಿರಲಿಲ್ಲ.

ಆದರೆ ಮಧ್ಯಾಹ್ನ 3ಗಂಟೆ ವೇಳೆಗೆ ಕೆರೆಯಲ್ಲಿ ಪೆರ್ನು ಗೌಡ ಅವರ ಶವರ ತೇಲುತ್ತಿದ್ದ ದೃಶ್ಯ ಕಂಡು ಬಂದಿದ್ದು, ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಅಪಘಾತವೋ ಎಂಬುದು ತನಿಖೆ ಮೂಲಕವಷ್ಟೇ ತಿಳಿಯಬೇಕಿದೆ.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿದ್ದು, ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.