ಜುಲೈ 1ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ದೂರದರ್ಶನ, ಸಂವೇದ, ಬಾನುಲಿ, ಆನ್‌ಲೈನ್ ಮತ್ತು ಇತರ ಆಫ್‌ಲೈನ್ ಮುಖಾಂತರ ಬೋಧನಾ ಪ್ರಕ್ರಿಯೆ

ಬೆಳ್ತಂಗಡಿ : ರಾಜ್ಯಾದ್ಯಂತ ಎಲ್ಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 2021-22ನೇ ಸಾಲಿನ ಶೈಕ್ಷಣಿಕ ವರ್ಷವು ಜುಲೈ.1ರಿಂದ ಪ್ರಾರಂಭಗೊಳ್ಳಲಿದ್ದು, ಈ ಶೈಕ್ಷಣಿಕ ಸಾಲಿನಲ್ಲಿ ಎಲ್ಲಾ ಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಅನುವಾಗುವಂತೆ, ಶೈಕ್ಷಣಿಕ ಅವಧಿಗಳು, ರಜಾ ದಿನಗಳು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಜುಲೈ 1ರಿಂದ ಅಕ್ಟೋಬರ್ 9ರ ವರೆಗೆ ಶಾಲೆಯ ಮೊದಲ ಅವಧಿಯಾಗಿದ್ದು, . ಅ.10ರಿಂದ 20ರವರೆಗೆ ದಸರಾ ರಜೆ, ನಂತರ ಅ.21ರಿಂದ ಎ.20ರವರೆಗೆ ಎರಡನೆ ಶೈಕ್ಷಣಿಕ ಅವಧಿ ಇರುವುದು. ಮೇ.1ರಿಂದ 28ರವರೆಗೆ ಬೇಸಿಗೆ ರಜೆ ಇದ್ದು, ಈ ಶೈಕ್ಷಣಿಕ ಸಾಲಿನಲ್ಲಿ ಬೋಧನಾ ಪ್ರಕ್ರಿಯೆಗೆ ಒಟ್ಟು 223 ದಿನಗಳು ಲಭ್ಯವಾಗಿರುತ್ತದೆ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಜೂ. 15ರಿಂದ ಮಕ್ಕಳ ಶಾಲಾ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಆ. 31ರೊಳಗೆ ಮುಕ್ತಾಯಗೊಳ್ಳಲಿದೆ. ಕೋವಿಡ್-19ರ ಪ್ರತಿಕೂಲ ಸನ್ನಿವೇಶದ ಹಿನ್ನೆಲೆಯಲ್ಲಿ ಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸಲು ಪರಿಸ್ಥಿತಿ ಸಹಕಾರಿಯಾಗದಿದ್ದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ದೂರದರ್ಶನ, ಸಂವೇದ, ಬಾನುಲಿ, ಆನ್‌ಲೈನ್, ಆಫ್‌ಲೈನ್ ಈ ರೀತಿಯ ಪರ್ಯಾಯ ಮಾರ್ಗಗಳ ಮೂಲಕ ಮಕ್ಕಳ ಪಾಠ-ಪ್ರವಚನಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಲಿಕೆ ಮತ್ತು ಮೌಲ್ಯ ಮಾಪನ ಕಾರ್ಯದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳತಕ್ಕದ್ದು. ಮಕ್ಕಳು ಶಿಕ್ಷಣದಿಂದ ಯಾವುದೇ ಕಾರಣಕ್ಕೂ ವಂಚಿತರಾಗದಂತೆ ಎಚ್ಚರಿಕೆ ವಹಿಸಿ, ಪ್ರಾಥಮಿಕ ಶಾಲಾ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು 2022 ರ ಎ.29ರಂದು ಹಾಗೂ ಪ್ರೌಢ ಶಾಲಾ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು 2022 ನೇ ಎ.30ರಂದು ನಡೆಸಬೇಕು.
ಕ್ರಿಸ್‌ಮಸ್ ರಜೆ ಬೇಡಿಕೆಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಿದ್ದಲ್ಲಿ ಈ ಬಗ್ಗೆ ಆಯಾ ಉಪ ನಿರ್ದೇಶಕರು ಈ ಕುರಿತು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಸುತ್ತೋಲೆಯಲ್ಲಿ ಪ್ರಕಟಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.