ಉಜಿರೆ: ಚಿಕಿತ್ಸಾ ಸಹಾಯಾರ್ಥವಾಗಿ ಆರ್ಥಿಕ ನೆರವು ನೀಡಿದ ಸ್ಪಂದನಾ ಸೇವಾ ಸಂಘ

ಉಜಿರೆ: ಬಂದಾರು ಗ್ರಾಮದ ಬೈಪಾಡಿ ನಿವಾಸಿ ಮಂಜುನಾಥ ಗೌಡರ ಪತ್ನಿ ರಾಧಾ ಅವರು ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇವರ ಸಹಾಯಕ್ಕೆ ಉಜಿರೆ ಸ್ಪಂದನಾ ಸೇವಾ ಸಂಘ ಮುಂದಾಗಿದ್ದು, ಸೇವಾ ಯೋಜನೆಯ ಮೊತ್ತವನ್ನು ಅಪಘಾತಕ್ಕೀಡಾಗಿರುವ ರಾಧಾ ಅವರಿಗೆ ಸಹಾಯಾರ್ಥವಾಗಿ ನೀಡಿದ್ದು, 15 ಸಾವಿರ ರೂ. ಚೆಕ್ಕನ್ನು ವಾಣಿ ಸೌಹಾರ್ದ ಕೋ-ಆಪರೇಟೀವ್ ನಿರ್ದೇಶಕ ಸುರೇಶ್ ಕೌಡಂಗೆ ಇವರ ಮೂಲಕ ಫಲಾನುಭವಿಯ ಪತಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ಪಂದನಾ ಸೇವಾ ಸಂಘದ ಸದಸ್ಯರಾದ ಸೀತಾರಾಮ ಬೆಳಾಲು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.