ಕಳಿಯ: ಗ್ರಾಮ ಪಂಚಾಯತ್ ಕೋವಿಡ್-19 ಪ್ರಗತಿ ಪರಿಶೀಲನಾ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ : ಇಲ್ಲಿಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೋವಿಡ್ -19 ಪರಿಶೀಲನೆಯ ಸಭೆ ಕಳಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮೇ.7 ರಂದು ನಡೆಯಿತು.

ಶಾಸಕ ಹರೀಶ್ ಪೂಂಜ ಸಭೆಯಲ್ಲಿ ಪಾಲ್ಗೊಂಡಿದ್ದ ಪಂ.ಸದಸ್ಯರು, ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ,ಸ್ಥಳೀಯ ಖಾಸಗಿ ವೈದ್ಯರುಗಳು ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಗ್ರಾಮಸ್ಥರಲ್ಲಿ ಕೊರೊನಾದ ಕುರಿತು ಜಾಗೃತಿ ಮೂಡಿಸಬೇಕು.

ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಪ್ರೇರೆಪಿಸಬೇಕಿದ್ದು, ಸೋಂಕು ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಿಬೇಕು ಎಂದು ಸಲಹೆಗಳನ್ನು ನೀಡಿದ್ದರು. ಜೊತೆಗೆ ಪ್ರತಿ ದಿನ ಕೊರೊನಾ ಪೀಡಿತರ ಮನೆಗೆ ಭೇಟಿ ನೀಡುವ ಮೂಲಕ ಆಹಾರ ಕ್ರಮ ಹಾಗೂ ಜೌಷಧೋಪಚಾರ ಸೇವೆಯನ್ನು ಲಭಿಸುವಂತೆ ಸೂಚಿಸಿದರು.

ತಾ.ಪಂ.ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕುಸುಮಧರ, ಪಡಂಗಡಿ ವೈದ್ಯಾಧಿಕಾರಿ ಡಾ.ಅಭಿಷೇಕ್, ಕಂದಾಯ ಅಧಿಕಾರಿ ಪಾವಡಪ್ಪ ದೊಡ್ಡಮನಿ, ಗ್ರಾ.ಪಂ. ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸೋಂಕು ಕುರಿತು ಮಾಹಿತಿ ನೀಡಿದರು.

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 30 ಜನ ಕೊರೊನ ಕೋವಿಡ್ ಪೀಡಿತರು ಇರುವ ಬಗ್ಗೆ ಮಾಹಿತಿಯನ್ನು ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಸಭೆಯಲ್ಲಿ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಗೌಡ ವಹಿಸಿದ್ದರು.

ಈ ಸಂದರ್ಭದಲ್ಲಿ  ಸ್ಥಳೀಯ ಡಾ.ಅನಂತ್ ಭಟ್, ಪಂಚಾಯತ್ ಸದಸ್ಯರಾದ ಸುಧಾಕರ ಮಜಲು,ಯಶೋಧರ ಶೆಟ್ಟಿ. ಮಾಣಿಕ್ಯ, ವಿಜಯ ಕುಮಾರ್ ಗೌಡ, ಮರೀಟಾ, ಪಿಂಟೊ, ಶ್ವೇತಾ ಶ್ರೀನಿವಾಸ್, ಇಂದಿರಾ, ಶಕುಂತಲಾ, ಪುಪ್ಪ, ಅಬ್ದುಲ್ ಕರೀಂ, ಲತೀಫ್, ಪಂಚಾಯತ್ ಕಾರ್ಯದರ್ಶಿ ಕುಂಇ್ಣ್ಣ, ಬಿಟ್ ಪೋಲೀಸ್ ಪಿ.ಎಸ್.ವೆಂಕಪ್ಪ, ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ಕಳಿಯ ಕಂದಾಯ ಇಲಾಖೆ ಸಿಬ್ಬಂದಿಗಳು,ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.