ಬೆಳ್ತಂಗಡಿ ಪಟ್ಟಣ ಪಂಚಾಯತ್: 10 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ದೃಢ, ಸುಧೆಮುಗೇರು ವಾರ್ಡ್ ಸೀಲ್ ಡೌನ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ 8ನೇ ವಾರ್ಡ್ ಸುಧೆಮುಗೇರು ಪ್ರದೇಶದ 10 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈ ಪ್ರದೇಶವನ್ನು ಸೀಲ್ ಡೌನ್ ಎಂದು ಘೋಷಿಸಲಾಗಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ತಿಳಿಸಿದ್ದಾರೆ.

ಮೇ.2ರಂದು ಸುದೆಮುಗೇರು  ಅಂಗನವಾಡಿಯಲ್ಲಿ ಕೊರೊನಾ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದ್ದು, ಇಲ್ಲಿಯವರೆಗೆ 97 ಮಂದಿ ಸ್ವ್ಯಾಬ್ ಟೆಸ್ಟ್ ಮಾಡಲಾಗಿದೆ. ಆ ಪೈಕಿ  10 ಕ್ಕೂ ಹೆಚ್ಚು ಮಂದಿಗೆ ಈಗ ಕೊರೊನಾ ಸೋಂಕು ತಗುಲಿರುವುದು ತಿಳಿದು ಬಂದಿದೆ.

 

ಇನ್ನು ಸುಧೆಮುಗೇರು ನಿವಾಸಿಗಳಿಬ್ಬರು ಲಾಕ್ ಡೌನ್ ಹಿನ್ನಲೆ ಬೆಂಗಳೂರಿನಿಂದ ಹಿಂದಿರುಗಿದ್ದು, ಅವರಿಂದ ಸೋಂಕು ಹರಡಿರಬಹುದು ಎಂದು ಹೇಳಲಾಗುತ್ತಿದೆ.

ಸೋಂಕು ದೃಢ ಪಟ್ಟವರನ್ನು ಲಾಯಿಲ ಕೊರೊನಾ ಕೇರ್ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸುದೇಮುಗೇರು ಮತ್ತು ಹುಡ್ಕೋ ರಸ್ತೆಯ 50 ಮನೆಗಳಿಗೆ ಇಂದು ಬೆಳಿಗ್ಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.

ಸದ್ಯ ವಾರ್ಡ್ ಎಲ್ಲ ನಿವಾಸಿಗಳಿಗೆ ಕೋವಿಡ್ ಸ್ವಾಬ್ ಪರೀಕ್ಷೆ ನಡೆಸುತ್ತಿದ್ದು, ಮೂಗಿನ ಹಾಗೂ ಗಂಟಲಿನ ದ್ರವ ಸಂಗ್ರಹಿಸಲಾಗುತ್ತಿದೆ.  ಈ ವೇಳೆ ನ.ಪಂ ಸದಸ್ಯ ಜಗದೀಶ್ ಡಿ., ಕರುಣಾಕರ್, ಲಕ್ಷೀನಾರಾಯಣ, ಅಶೋಕ್, ಪೌರಕಾಮಿ೯ಕ ಸುರೇಶ್ ಉಪಸ್ಥಿತಿ ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.