ರಾಜ್ಯದಲ್ಲಿ ಮೇ.10 ರಿಂದ 24ರವರೆಗೆ ಸಂಪೂರ್ಣ ಲಾಕ್​ಡೌನ್​: ಸಿಎಂ ಮಹತ್ವದ ಘೋಷಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಹೆಚ್ಚಾಗಿರುವ ಕಾರಣ ಮೇ. 10ರಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಿ ಮಹತ್ವದ ಆದೇಶ ಹೊರಹಾಕಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್​ವೈ ಮೇ. 10ರಿಂದ ಮೇ. 24ರವರೆಗೆ ಸಂಪೂರ್ಣ ಲಾಕ್​ಡೌನ್ ಮಾಡುವುದಾಗಿ ಘೋಷಣೆ ಮಾಡಿದ್ದು, ಹೋಟೆಲ್, ಬಾರ್​, ಪಬ್​ ಸಂಪೂರ್ಣವಾಗಿ ಬಂದ್ ಆಗಿರಲಿವೆ.

ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ಬ್ಯಾನ್ ಮಾಡಲಾಗಿದೆ.ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ಗಂಟೆಯಿಂದ 10ಗಂಟೆವೆಗೆ ಅವಕಾಶ ನೀಡಲಾಗಿದೆ. ಕಟ್ಟಡ ಕಾಮಗಾರಿಗಳಿಗೆ ಯಾವುದೇ ತೊಂದರೆ ಇರುವುದಿಲ್ಲ ಎಂದಿದ್ದಾರೆ.

ಸಿಎಂ ಹೇಳಿರುವ ಮುಖ್ಯಾಂಶಗಳು

* ಸರ್ಕಾರಿ ಕಚೇರಿಗಳು ಭಾಗಶಃ ಕೆಲಸ ಮಾಡಲು ಅನುಮತಿ

* ಕೂಲಿ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗದಂತೆ ಮನವಿ

* ಬಾರ್​ನಲ್ಲೂ ಪಾರ್ಸಲ್​ಗಳಿಗೆ ಅವಕಾಶವಿಲ್ಲ

* ಬಾರ್​ & ರೆಸ್ಟೋರೆಂಟ್​ ಸಂಪೂರ್ಣವಾಗಿ ಬಂದ್

* ​ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ

* ಅಗತ್ಯ ವಸ್ತುಗಳ ಸರಬರಾಜಿಗೆ ಗೂಡ್ಸ್ ವಾಹನ ಓಡಾಟ

* ಆನ್​ಲೈನ್​ ಡೆಲಿವರಿ ಸರ್ವಿಸ್​ಗೂ ಅವಕಾಶ

* ಹಣ್ಣು, ಮಾಂಸ, ತರಕಾರಿ ಅಂಗಡಿ ಓಪನ್ ಇರಲಿವೆ

* ಹಾಲಿನ ಅಂಗಡಿ ಬೆಳಗ್ಗೆಯಿಂದ ಸಂಜೆ 6ರವರೆಗೆ ಓಪನ್​

* ರಸ್ತೆ ಕಾಮಗಾರಿ, ನಿಗದಿತ ಕಟ್ಟಡ ನಿರ್ಮಾಣಕ್ಕೆ ಅವಕಾಶ

* ವಿವಾಹ ಸಮಾರಂಭದಲ್ಲಿ ಕೇವಲ 50 ಜನರಿಗೆ ಅವಕಾಶ

* ಕಾರ್ಮಿಕರನ್ನ ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಕಾರ್ಯ

* ಕೈಗಾರಿಕಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.