ವಿನಾಕಾರಣ ಸುತ್ತಾಡುತ್ತಿದ್ದ ವಾಹನ ಸವಾರರ ಮೇಲೆ ಕೇಸು ದಾಖಲಿಸಿದ ಪುಂಜಾಲಕಟ್ಟೆ ಪೊಲೀಸರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿಗಳು ಆದೇಶ ನೀಡಿ ಜಾರಿಗೊಳಿಸಿದ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ವಿನಾ ಕಾರಣ ವಾಹನದಲ್ಲಿ ಸುತ್ತಾಡುತ್ತಿದ್ದ ಹಲವರನ್ನು ಮಡಂತ್ಯಾರು, ಬಸವನಗುಡಿ ಚೆಕ್‌ಪೋಸ್ಟ್ ಬಳಿ ತಡೆದು ನಿಲ್ಲಿಸಿದ ಪುಂಜಾಲಕಟ್ಟೆ ಪೊಲೀಸ್ ಸಿಬ್ಬಂದಿಗಳು ಕೇಸು ದಾಖಲಿಸಿಕೊಂಡಿದ್ದಾರೆ.

ಇಂದು ಬೆಳಿಗ್ಗೆ 6.00ರಿಂದ 9.00ಗಂಟೆಯವರೆಗೆ ಮಾತ್ರ ಅಗತ್ಯವಸ್ತುಗಳಿಗೆ ಮನೆಯಿಂದ ಹೊರಬರುವಂತೆ ಆದೇಶಿಸಿದ್ದು, ಆ ಬಳಿಕವೂ ನಿಯಮ ಮೀರಿ ಅನಗತ್ಯವಾಗಿ ವಾಹನದಲ್ಲಿ ಓಡಾಟ ನಡೆಸುತ್ತಿದ್ದವರನ್ನು ತಡೆದು ನಿಲ್ಲಿಸಿ ವಿಚಾರಿಸಿದ ಪೊಲೀಸರು ಕೇಸು ದಾಖಲಿಸಿದ್ದು, ಮತ್ತೆ ಈ ತಪ್ಪು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.