ಕೊಕ್ಕಡ: ವಿಪತ್ತು ನಿರ್ವಹಣಾ ಘಟಕದಿಂದ ಮನೆ ದುರಸ್ತಿ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ದ.ಕ ಜಿಲ್ಲೆಯಾದ್ಯಂತ ಈಗಾಗಲೇ ಮಳೆ ಆಗುತ್ತಿದ್ದು, ನಾನಾ ಕಡೆ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿರುವ ಘಟನೆಗಳು ವರದಿಯಾಗಿದೆ. ಈ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ  ಕೊಕ್ಕಡ ವಿಪತ್ತು ನಿರ್ವಹಣಾ ಘಟಕ  ಆರ್ಥಿಕವಾಗಿ ಹಿಂದುಳಿದ ಪಟ್ರಮೆ ಗ್ರಾಮದ ನಿವಾಸಿ ಪಾರ್ವತಿಯವರ ಮನೆಯನ್ನು ದುರಸ್ತಿ ಮಾಡಿ ಕೊಟ್ಟಿದ್ದಾರೆ.

ವಿಪತ್ತು ನಿರ್ವಹಣಾ ಘಟಕ ಸದಸ್ಯರುಗಳಾದ ನಾರಾಯಣ ಗೌಡ ಹತ್ಯಡ್ಕ, ಶೀನಪ್ಪ ಶಿಶಿಲ, ಜಗದೀಶ್ ಶಿಶಿಲ, ಮಾಧವ ದೇನೋಡಿ, ಗಂಗಾಧರ್ ಗೌಡ ಶಿಶಿಲ, ತನಿಯಪ್ಪ ಶಿಶಿಲ, ಗುರುಪ್ರಸಾದ್ ಕೊಕ್ಕಡ, ರಮೇಶ್ ಭೈರಕಟ್ಟ ಮತ್ತು ಗುರುಪ್ರಸಾದ್ ಎಂ ಇವರುಗಳು ಒಟ್ಟು ಸೇರಿ  ಗ್ರಾಮಸ್ಥರ ಸಹಕಾರ ದೊಂದಿಗೆ ಯೋಜನೆಯ ಅನುದಾನ ಬಳಸಿಕೊಂಡು ದುರಸ್ತಿ ಕಾರ್ಯವನ್ನು ನಡೆಸಿದ್ದು,  ಮಳೆಗಾಲದಲ್ಲಿ ಮನೆಗೆ ಹಾನಿಯಾಗದಂತೆ  ಮನೆಯ ಎದುರು ಚಾವಣಿ ನಿರ್ಮಿಸಲಾಗಿದೆ.

ಈ  ವೇಳೆ ಕೊಕ್ಕಡ ವಲಯ ಮೇಲ್ವಿಚಾರಕಿ ಮಮತಾ  ಮಾರ್ಗದರ್ಶನ ನೀಡಿದ್ದು, ವಿಪತ್ತು ನಿರ್ವಹಣಾ ಘಟಕ ಸಂಯೋಜಕಿ ಗಿರಿಜಾ, ಎಸ್. , ಪಟ್ರಮೆ ಯ ಸದಾಶಿವ ಸೇವಾಪ್ರತಿನಿಧಿ  ಅಗತ್ಯ ಸಹಕಾರ ನೀಡಿದ್ದಾರೆ. ಹಾಗೇ ದುರಸ್ತಿ ಕಾರ್ಯದಲ್ಲಿ ಶ್ರಮಿಸಿದ ಎಲ್ಲಾ ಸ್ವಯಂ ಸೇವಕರಿಗೂ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿ ಯವರು ಧನ್ಯವಾದ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.