ಅಳದಂಗಡಿ: ಭೀಕರ ಗಾಳಿಗೆ ಕೊಟ್ಟಿಗೆಗೆ ಮರಬಿದ್ದು ಹಾನಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಕಾರಂದೂರು ಎಂಬಲ್ಲಿ ಇತ್ತೀಚೆಗೆ ಬೀಸಿದ ಭೀಕರ ಗಾಳಿಗೆ ಮರವೊಂದು ದನದ ಕೊಟ್ಟಿಗೆಯ ಮೇಲೆ ಉರುಳಿಬಿದ್ದು, ಅಪಾರ ನಷ್ಟವುಂಟಾಗಿದೆ.

ಬಡಗಕಾರಂದೂರು ಗ್ರಾಮದ ಮಡಂತ್ಯಾರು ಮನೆಯ ಬಾಬು ಮೂಲ್ಯ ರವರ ದನದ ಕೊಟ್ಟಿಗೆಗೆ ಬೃಹತ್ ಗಾತ್ರದ ಹಲಸಿನ ಮರವೊಂದು ಉರುಳಿ ಬಿದ್ದ ಪರಿಣಾಮ ಕೊಟ್ಟಿಗೆಯ ಹೆಂಚುಗಳು ಪುಡಿಪುಡಿಯಾಗಿ, ರೀಪು ಪಕ್ಕಾಸುಗಳು ಮುರಿದು, ಗೋಡೆ ಕುಸಿದಿದ್ದು, ಅಂದಾಜು ರೂ.75 ಸಾವಿರಕ್ಕೂ ಮಿಕ್ಕಿ ನಷ್ಟವಾಗಿದೆ. ಅಲ್ಲದೆ ಸಂಜೆ ಕೊಟ್ಟಿಗೆಯಲ್ಲಿ ದನಗಳ ಹಾಲು ಕರೆಯುತ್ತಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಹರೀಶ್ ಆಚಾರ್ಯ, ಗ್ರಾ.ಪಂ ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಕರಣಿಕರಾದ ವಿಜೇತ್ ಜೈನ್, ಸ್ಥಳೀಯರಾದ ಮಂಜುನಾಥ ಆಚಾರ್ಯ ರವರು ಭೇಟಿ ನೀಡಿ ಪರಿಶೀಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.