26 ವರ್ಷಗಳಿಂದ ಕಾಣೆಯಾಗಿದ್ದ ಬೆಳಾಲಿನ ವ್ಯಕ್ತಿ ಮರಳಿ ಮನೆಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಇಲ್ಲಿಯ ಓಡಿಪ್ರೊಟ್ಟು ಬಳಿಯ ವ್ಯಕ್ತಿಯೋರ್ವರು ಸುಮಾರು 26 ವರ್ಷಗಳಿಂದ ಕಾಣೆಯಾಗಿದ್ದು, ಮರಳಿ ಮನೆ ಸೇರಿದ ಘಟನೆ ಮೇ.6 ರಂದು ವರದಿಯಾಗಿದೆ.
ಬೆಳಾಲು ಗ್ರಾಮದ ಓಡಿಪ್ರೊಟ್ಟು ಮನೆಯ ಕೊರಗಪ್ಪ ಪೂಜಾರಿಯವರ ಪುತ್ರ ಶಿವಪ್ಪ ಪೂಜಾರಿ ಮರಳಿ ಮನೆ ಸೇರಿದ ವ್ಯಕ್ತಿಯಾಗಿದ್ದಾರೆ.
ಘಟನೆಯ ವಿವರ: ಶಿವಪ್ಪ ಪೂಜಾರಿಯವರು ತಮ್ಮ 18ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದರು. ಮನೆ ಬಿಟ್ಟು ಹೋಗಿದ್ದ ಇವರು ಪ್ರಾರಂಭದ ಕೆಲವು ಸಮಯದಲ್ಲಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಆ ಸಂದರ್ಭದಲ್ಲಿ ಮನೆಯವರ ಸಂಪರ್ಕದಲ್ಲಿದ್ದರು. ಬಳಿಕ ಸಂಪರ್ಕಕ್ಕೆ ಸಿಗದ ಇವರು ತರಿಕೆರೆ, ಮೈಸೂರು ಕಡೆಗಳಲ್ಲಿ ಕೆಲಸಮಾಡುತ್ತಿದ್ದು, ಪ್ರಸ್ತುತ ಮೈಸೂರಿನ ಹೊಟೇಲೊಂದರಲ್ಲಿ ಅಡಿಗೆ ಕೆಲಸಗಾರರಾಗಿ ಉದ್ಯೋಗದಲ್ಲಿದ್ದರು.

ಇವರಿಗೆ ತರೀತರಿಕೆರೆಯ ಮೀನಾಕ್ಷಿ ಯವರೊಂದಿಗೆ ವಿವಾಹವಾಗಿದ್ದು, ಪುತ್ರ ಪ್ರಸನ್ನ ಕುಮಾರ್, ಮಗಳು ಪ್ರಾರ್ಥನಾರೊಂದಿಗೆ ವಾಸ್ತವ್ಯವಿದ್ದರು. ಇದೀಗ ಲಾಕ್‌ಡೌನ್ ಘೋಷಣೆಯಾಗಿದ್ದು, ಮೈಸೂರಿನಲ್ಲಿ ಹೊಟೇಲುಗಳು ಬಂದ್ ಆಗಿರುವುದರಿಂದ ಇವರು ಲಾರಿಯಲ್ಲಿ ಬಂಟ್ವಾಳಕ್ಕೆ ಬಂದಿದ್ದರು.
ಶಿವಪ್ಪ ಪೂಜಾರಿಯವರು ಬಂಟ್ವಾಳದಲ್ಲಿರುವ ಬೆಳಾಲಿನ ಮುಸ್ಲಿಂ ಕುಟುಂಬದವರ ಮೂಲಕ ಬೆಳಾಲಿನಲ್ಲಿರುವ ತಮ್ಮ ಮನೆಯವರ ಬಗ್ಗೆ ತಿಳಿಸಿದ್ದರು. ವಿಚಾರ ತಿಳಿದ ಬೆಳಾನಲಿನವರಾದ ತಾರಿದಡಿ ಆದಂ, ಆದರ್ಶನಗರದ ಉಸ್ಮಾನ್, ಕಬೀರ್, ಪರಂಗಿಪೇಟೆಯ ಅಧ್ಯಾಪಕ ಮುಸ್ತಪ ಕೌಸರಿ ಇವರುಗಳ ನೆರವಿನೊಂದಿಗೆ ಬೆಳಾಲಿನ ಓಡಿಪ್ರೊಟ್ಟು ಮನೆಗೆ ಕರೆತರುವಲ್ಲಿ ಸಹಕರಿಸಿದರು. ಮೇ 6 ರಂದು ಶಿವಪ್ಪರವರ ಓಡಿಪ್ರೊಟ್ಟು ಮನೆಯ ಸಹೋದರರು, ಸಂಬಂಧಿಕರು ಬಂಟ್ವಾಳಕ್ಕೆ ಹೋಗಿ ಮನೆಗೆ ಕರೆದುಕೊಂಡು ಬಂದಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.