ಸಿಇಒ ರವೀಂದ್ರನ್ ಆತ್ಮಹತ್ಯೆ: ಆರೋಪಿಗಳನ್ನು ಬಂಧಿಸುವಂತೆ ಬಿಲ್ಲವ ಸಂಘದಿಂದ ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ ರವರು ಮೇ.3ರಂದು ಸಂಘದ ಸಭಾಭವನದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ಬರೆದಿಟ್ಟ ಡೆತ್‌ನೋಟ್ ಆಧಾರದಲ್ಲಿ ಆರೋಪಿಗಳಾದ ಸಂಘದ ಮಾಜಿ ಅಧ್ಯಕ್ಷರುಗಳು ಹಾಗೂ ಹಾಲಿ ನಿರ್ದೇಶಕರಾದ ಎಂ ಜಯರಾಮ ಭಂಡಾರಿ, ರಘುಚಂದ್ರ ರಾವ್ ಹಾಗೂ ಸಿಬ್ಬಂದಿ ಸ್ವರ್ಣ ಗೌರಿಯವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಶೀಘ್ರವೇ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಧರ್ಮಸ್ಥಳ ಶ್ರೀ ಗುರುನಾರಾಯಣ ಸೇವಾ ಸಮಿತಿ ಮತ್ತು ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಮಿತಿಯ ವತಿಯಿಂದ ಮೇ.6 ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸಂಘದ ಗೌರವಾಧ್ಯಕ್ಷ ಮಾಜಿ ಶಾಸಕ ಕೆ ವಸಂತ ಬಂಗೇರ, ಸಂಘದ ಉಪಾಧ್ಯಕ್ಷ ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ, ಕೋಶಾಧಿಕಾರಿ ಎಪಿಎಂಸಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಡ್ಕ, ಪ್ರಧಾನ ಕಾರ್ಯದರ್ಶಿ ನಾರಾಯಣ ಸುವರ್ಣ ಬೆಳಾಲು, ನಿರ್ದೇಶಕ ಡಿ ಪ್ರಭಾಕರ ಪೂಜಾರಿ, ಧರ್ಮಸ್ಥಳ ಗಾ.ಪಂ. ಸದಸ್ಯ ಹರೀಶ್ ಸುವರ್ಣ, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ ಪ್ರಸಾದ್, ಧರ್ಮಸ್ಥಳ ಶ್ರೀ ಗುರುನಾರಾಯಣ ಸೇವಾ ಗ್ರಾಮ ಸಮಿತಿಯ ಅಧ್ಯಕ್ಷ ಪ್ರಕಾಶ ಪೂಜಾರಿ, ಉಪಾಧ್ಯಕ್ಷ ಶ್ರೀಧರ ಪೂಜಾರಿ, ಪದಾಧಿಕಾರಿಗಳಾದ ಪುರುಷೋತ್ತಮ ಪೂಜಾರಿ, ಆನಂದ ಜೋಡುಸ್ಥಾನ, ಗೋಪಾಲ ಪೂಜಾರಿ ನೇತ್ರಾವತಿ, ಶಶಿಧರ ಧರ್ಮಸ್ಥಳ, ಎಸ್‌ಎನ್‌ಡಿಪಿ ಪದಾಧಿಕಾರಿಗಳಾದ ಸಚ್ಚಿದಾನಂದ, ಸ್ಮಿತೇಶ್, ಸೋಮನಾಥನ್ ಕೆ.ವಿ, ರಾಜೀವ, ಶಶಿಧರನ್, ರಾಜನ್, ಬಾಬು ಎಂ.ಕೆ, ಸಿಂಧೂ ದೇವಿ, ವಸಂತ, ಯಶೋಧರ ಚಾರ್ಮಾಡಿ, ಉಜಿರೆ, ತೋಟತ್ತಾಡಿ, ಮಿಯ್ಯಾರು ಎಸ್‌ಎನ್‌ಡಿಪಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಠಾಣಾಧಿಕಾರಿ ಪವನ್ ನಾಯಕ್ ರವರು  ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ಬಳಿಕ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರನ್ನು ಭೇಟಿಯಾಗಿ ರವೀಂದ್ರನ್ ರವರ ಅಸಹಜ ಸಾವಿಗೆ ಕಾರಣರಾದ ಆರೋಪಿಗಳನ್ನು ಸಂಸ್ಥೆಯಿಂದ ವಜಾಗೊಳಿಸುವಂತೆ ಮನವಿ ನೀಡಿದರು.

ಬೆಳಿಗ್ಗೆ ರವೀಂದ್ರನ್ ರವರ ಮನೆಗೆ ಶ್ರೀ ನಾರಾಯಣ ಗುರು ಸೇವಾ ಸಂಘ ಹಾಗೂ ಎಸ್‌ಎನ್‌ಡಿಪಿ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಮೃತರ ಪತ್ನಿ ಹಾಗೂ ಮನೆಯವರಿಗೆ ಸಾಂತ್ವನ ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.