ಪಡಂಗಡಿ : ಈಜಲು ಹೋದ ಯುವಕ ನೀರು ಪಾಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಪಡಂಗಡಿ: ಇಲ್ಲಿನ ಸಮೀಪ ಪಲ್ಗುಣಿ ನದಿಯ ಮಾಂತ್ರಾಯಿ ಗುಂಡಿ ಯಲ್ಲಿ ಈಜಲು ಹೋದ ಯುವಕ ಸಾವನ್ನಪ್ಪಿದ ಘಟನೆ ಮೇ.6ರಂದು ನಡೆದಿದೆ.

ಮೃತ ವ್ಯಕ್ತಿಯನ್ನು ಕಾರ್ಯಾಣ ದುಗ್ಗಪ್ಪ ಎಂಬವರ ಮಗ ನಿಶಾಂತ್ (22) ಎಂದು ಗುರುತಿಸಲಾಗಿದ್ದು, ಈತ ಮತ್ತು ಈತನ 5 ಜನ ಸ್ನೇಹಿತರು  ಸ್ಥಳೀಯ  ಹೊಳೆಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ. ಆ ಪೈಕಿ ಓರ್ವನಿಗೆ ಈಜು ಬಾರದ ಕಾರಣ ಅರ್ಧದಲ್ಲಿ ಉಸಿರುಗಟ್ಟಿ ನೀರಿನಲ್ಲಿ ಮುಳುಗಿದ್ದು,  ಆತನನ್ನು ರಕ್ಷಿಸಲು ನಿಶಾಂತ್ ಮುಂದಾಗಿದ್ದಾರೆ. ಆದರೆ ಅಪಾಯದಲ್ಲಿ ಸಿಲುಕಿದ್ದ ಹುಡುಗ ಪಾರಾಗಿದ್ದು, ಕಾಪಾಡಲು ಹೋದ ನಿಶಾಂತ್  ಸಾವನ್ನಪ್ಪಿದ್ದಾರೆ.

ಈ ವೇಳೆ ಆತನ ಸ್ನೇಹಿತರು ನಿಶಾಂತ್ ನನ್ನು  ಉಳಿಸುವ ಪ್ರಯತ್ನ ನಡೆಸಿದ್ದು, ದಡಕ್ಕೆತ್ತಿ ತಂದಿದ್ದಾರೆ. ಅಲ್ಲದೇ ಗೆಳೆಯನನ್ನು ಉಳಿಸಿಕೊಳ್ಳಬೇಕೆಂಬ ಹಠದಿಂದ ಚಿಕಿತ್ಸೆಗಾಗಿ ಸ್ಥಳಕ್ಕೆ ಅಂಬುಲೆನ್ಸ್ ಅನ್ನು ಬರ ಮಾಡಿಕೊಂಡಿದ್ದರು. ಆದರೆ ದುರಾದೃಷ್ಟವಶಾತ್ ಆ ವೇಳೆಗಾಗಲೇ ನಿಶಾಂತ್ ಪ್ರಾಣ ಪಕ್ಷಿ ಹಾರಿ ಹೋಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಕ್ರೀಡಾ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಬಳಂಜ ವಾಲಿಬಾಲ್ ಕ್ಲಬ್ ನ ಸದಸ್ಯರಾಗಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.