ತೃಣಮೂಲ ಕಾಂಗ್ರೆಸ್‌ನಿಂದ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ: ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಪಶ್ಚಿಮ ಬಂಗಾಳದ ಸರಕಾರ ತೃಣಮೂಲ ಕಾಂಗ್ರೆಸ್ ವಿಧಾನಸಭಾ ಚುನಾವಣೆ ವಿಜಯದ ಬಳಿಕ ಅಲ್ಲಿಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಗೂಂಡಾವರ್ತನೆಯೊಂದಿಗೆ ಥಳಿಸುವುದು, ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ ಸುಡುವುದು, ಮಹಿಳಾ ಕಾರ್ಯಕರ್ತರಿಗೆ ಅಮಾನವೀಯವಾಗಿ ಹಿಂಸಿಸಿ ತೊಂದರೆಗಳನ್ನು ಕೊಟ್ಟಿರುವುದನ್ನು ಖಂಡಿಸಿ ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ಮೇ. 5 ರಂದು ಪಕ್ಷದ ಕಛೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.


ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ದೇಶದಾದ್ಯಂತ ತಾಲೂಕು ಕೇಂದ್ರದಲ್ಲಿ ಈ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್, ಎನ್ ಗಣೇಶ್ ಗೌಡ ನಾವೂರು, ಮಂಡಲ ಉಪಾಧ್ಯಕ್ಷರುಗಳಾದ ಹರೀಶ ಸಾಲಿಯಾನ್ ನಾವೂರು, ಸೀತಾರಾಮ ಬಿ.ಎಸ್ ಬೆಳಾಲು, ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಮೊದಲಾದವರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.