ಕೋವಿಡ್ ಬಿಕ್ಕಟ್ಟು: ಅಗತ್ಯ ಸೇವಾ ಸೌಲಭ್ಯಗಳ ನಿರ್ವಹಣೆಯಲ್ಲಿ ಕಾರ್ಯಪ್ರವೃತ್ತವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯಿಂದಾಗಿ ಸಮಾಜದ ಸ್ವಾಸ್ಥ ಹದೆಗೆಟ್ಟಿದ್ದು, ಸಾಮಾನ್ಯ ವರ್ಗದವರ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಇಂತಹ ದುಃಸ್ಥಿತಿಯ ಸಮಯದಲ್ಲಿ ಸಮಾಜಲ್ಲಿ ಸಕ್ರಿಯವಾಗಿರುವ  ಸಾಮಾಜಿಕ ಸಂಘಟನೆಗಳು ಅಗತ್ಯವುಳ್ಳವರಿಗೆ ಹಾಗೂ ನಿರ್ಗತಿಕರಿಗೆ ಸಹಾಯ ಹಸ್ತ ನೀಡುವ ಮೂಲಕ ಕರ್ತವ್ಯ ನಿಬಾಯಿಸಬೇಕಿದೆ. ಈ ನಿಟ್ಟಿನಲ್ಲಿಯೇ  ರಾಷ್ಟ್ರೀಯ ಸ್ವಯಂಸೇವಕ ಸಂಘ ಆರೋಗ್ಯ ಬಿಕ್ಕಟ್ಟು ನಿರ್ವಹಣೆಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ಕೋವಿಡ್ನಿಂದ ಎದುರಾಗುವ ಸಂಕಷ್ಟವನ್ನು ನಿವಾರಿಸುವತ್ತ ಕಾರ್ಯಾಚರಿಸುತ್ತಿದೆ ಎಂದು ಮಾನ್ಯ ಜಿಲ್ಲಾ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ತಿಳಿಸಿದರು.

ಅಗತ್ಯ ಸೇವಾ ಕಾರ್ಯಗಳನ್ನು ಪೂರೈಸುವುದಕ್ಕಾಗಿ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ತೆರೆದಿದ್ದು, ಅದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ತನ್ನ ಸದಸ್ಯರುಗಳನ್ನು  ಏಳೆಂಟು ಗುಂಪುಗಳಾಗಿ ಮಾಡಿ ಬೆಳ್ತಂಗಡಿಯ ಸೇವಾ ಭಾರತಿ ಕೇಂದ್ರದೊಂದಿಗೆ ಕೈಜೋಡಿಸಿ ತಾಲೂಕಿನಾದ್ಯಾಂತ ಅಗತ್ಯ ಸೇವಾ ಕಾರ್ಯಗಳನ್ನು ಪೂರೈಸುವಲ್ಲಿ ಕಾರ್ಯಾಚರಿಸಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡರು.

ಈ ವೇಳೆ ವಿನಯಚಂದ್ರ ಮಾನ್ಯ ಉಜಿರೆ ತಾಲೂಕು ಸಂಘಚಾಲಕರು, ಶ್ರೀಗಣೇಶ್ ಕಾಂತಾಜೆ ಮಾನ್ಯ ಬೆಳ್ತಂಗಡಿ ತಾಲೂಕು ಸಂಘಚಾಲಕರು, ಜಗದೀಶ ಕಲ್ಲಡ್ಕ ವಿಭಾಗ ಸಹಕಾರ್ಯವಾಹ, ಉಪಸ್ಥಿತರಿದ್ದರು ಹಾಗೂ ಸಂಘದ ವಿವಿಧ ಕ್ಷೇತ್ರದ ಕಾರ್ಯಕರ್ತರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.