ಕನಸು ಮಾರಾಟಕ್ಕಿದೆ ಕನ್ನಡ ಚಲನಚಿತ್ರಕ್ಕೆ ಅಂತಾರಾಷ್ಟೀಯ ಪ್ರಶಸ್ತಿ

Kanasu Maratakkide Movie: Showtimes, Review, Songs, Trailer, Posters, News  & Videos | eTimes

ಬೆಳ್ತಂಗಡಿ: ಕನಸು ಮಾರಾಟಕ್ಕಿದೆ ಕನ್ನಡ ಚಲನಚಿತ್ರವು 11ನೇ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2021 ಆಯ್ಕೆಯಾಗಿ ವಿಶೇಷ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಚಿತ್ರದ ನಿರ್ದೇಶಕ ಸ್ಮಿತೇಶ್ ಬಾರ್ಯ ತಿಳಿಸಿದ್ದಾರೆ
ಹಲವಾರು ರಾಷ್ಟ್ರಗಳ ಸಿನೆಮಾಗಳ ಜೊತೆ ಕನ್ನಡದ ಈ ಚಿತ್ರವು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಕನ್ನಡ ಚಲನಚಿತ್ರರಂಗಕ್ಕೆ ಮತ್ತೊಂದು ಪ್ರಶಸ್ತಿಯ ಕಿರೀಟ ತೊಡಿಸಿದ ಹೆಮ್ಮೆ ಕನಸು ಮಾರಾಟಕ್ಕಿದೆ ಚಿತ್ರ ತಂಡಕ್ಕಿದೆ. ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಚಲನ ಚಿತ್ರೋತ್ಸವ ಈ ಬಾರಿ ಕೋವಿಡ್ ಕಾರಣದಿಂದ ಆನ್ಲೈನ್ ಮೂಲಕ ಆವಾರ್ಡ್ ಘೋಷಿಸಲಾಗಿದೆ. ನಮ್ಮ ಈ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದರು.
ಈ ಚಿತ್ರವನ್ನು ಶಿವಕುಮಾರ್ ಬಿ. ನಿರ್ಮಿಸಿದ್ದು, ನಾಯಕ ಪ್ರಜ್ಞೇಶ್, ನಾಯಕಿಯರಾದ ಸ್ವಸ್ತಿಕಾ, ನವ್ಯಾ ಪೂಜಾರಿ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದ ಗೌಡ, ಅನೀಶ್ ಪೂಜಾರಿ, ಧೀರಜ್, ಚಿದಂಬರ,
ಹಿರಿಯ ನಟ ಸಿದ್ಲಿಂಗು ಶ್ರೀಧರ್, ಮೋಹನ್ ಶೇಣಿ, ಆಥಿರ ಮೊದಲಾದವರು ಅಭಿನಯಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.