ಧರ್ಮಸ್ಥಳದ ಸೇವಾ ಸಹಕಾರಿ ಬ್ಯಾಂಕಿನ ಸಿಇಒ ರವೀಂದ್ರನ್ ನೇಣಿಗೆ ಶರಣು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಧರ್ಮಸ್ಥಳ: ಧರ್ಮಸ್ಥಳ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಡಿ(60.ವ)ಯವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.3ರಂದು ನಡೆದಿದೆ.
ಮೇ.3ರಂದು ಬೆಳಿಗ್ಗೆ 7.30 ರ ವೇಳೆ ಕಛೇರಿಗೆ ಬಂದವರು ತಮ್ಮ ಹಾಜರಿಯನ್ನು ನಮೂದಿಸಿದ್ದರು.  ಮದ್ಯಾಹ್ನ ಸಂಘದ ಅಟಲ್ ಜಿ ಸಭಾಭವನದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಸಹಕಾರಿ ಸಂಘದ ವೃತ್ತಿ ಬದುಕಿನಲ್ಲಿ ಸುದೀರ್ಘ 42 ವರ್ಷಗಳ ಸೇವೆ ಸಲ್ಲಿಸಿದ್ದ ಅವರು ಇದೇ ಮೇ ತಿಂಗಳ ಅಂತ್ಯದಲ್ಲಿ ನಿವೃತ್ತರಾಗಬೇಕಾದವರು ತಿಂಗಳ ಮೊದಲೇ ಸ್ವಯಂ ನಿವೃತ್ತಿಯ ಪತ್ರ ಬರೆದಿಟ್ಟು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೇ.3 ರಂದು ಬೆಳಿಗ್ಗೆ ಸೊಸೈಟಿಗೆ ಬೇಗ 7.30 ಗಂಟೆಗೆ ಬಂದವರು ಹಾಜರಿ ಪುಸ್ತಕದಲ್ಲಿ ಸಹಿ ಹಾಕಿದ್ದಾರೆ. ಆ ಬಳಿಕ ವಿಆರ್‌ಎಸ್ ಪತ್ರ ಬರೆದಿಟ್ಟು ಅದರಲ್ಲಿ ಸಂಘದ ಅಧ್ಯಕ್ಷರು 9.30 ಕ್ಕೆ ಸ್ವೀಕರಿಸಿರುವುದಾಗಿ ಮೊಹರು ಹಾಕಿದ್ದು ಕಾಣಸಿಗುತ್ತದೆ. ಇದೆಲ್ಲ ಬೆಳವಣಿಗೆಯ ನಂತರ ಅವರು ತನ್ನ ಕಚೇರಿ ಟೇಬಲ್ ಮೇಲೆ ಇರುವ ಕಂಪ್ಯೂಟರ್ ನಲ್ಲಿ ಶುಭವಾಗಲಿ ಎಂದೇನೋ ಬರೆದು ನೇರವಾಗಿ ಸಂಘದ ಮೇಲ್ಭಾಗದಲ್ಲೇ ಇರುವ ಸಭಾಂಗಣದ ಸ್ಕ್ರೀನ್ ಹಿಂದುಗಡೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್

ಮಧ್ಯಾಹ್ನ ಕೃತ್ಯ ಬೆಳಕಿಗೆ; ಸಿಇಒ ಅವರು ಕೆಲ ಹೊತ್ತಿನಿಂದ ಅವರ ಚೇಂಬರ್‌ನಲ್ಲಿ ಕಾಣುತ್ತಿರಲಿಲ್ಲ. ಅವರ ಹುಡುಕಾಟಕ್ಕಾಗಿ ಸಿಬ್ಬಂದಿ ಮೊಬೈಲ್‌ಗೆ ಕರೆ ಮಾಡಿದಾಗ, ಸೊಸೈಟಿಯ ಅಟಲ್ ಜಿ ಸಭಾಭವನದಲ್ಲಿ ಅವರ ಮೊಬೈಲ್ ರಿಂಗಣಿಸುವುದು ಕೇಳಿತ್ತು. ಅಲ್ಲಿ ಹೋಗಿ ಗಮನಿಸಿದಾಗ ಅವರು ನೇಣಿನಲ್ಲಿ ನೇತಾಡುತ್ತಿದ್ದರು. ಈ ಸ್ಥಳದಲ್ಲಿ ವಿಷದ ಬಾಟಲಿಯೂ ಪತ್ತೆಯಾಗಿದ್ದು, ಅವರು ವಿಷ ಸೇವಿಸಿ ಬಳಿಕ ನೇಣಿಗೆ ಕೊರಳೊಡ್ಡಿದರೇ ಅಥವಾ ವಿಷ ಸೇವಿಸುವ ತೀರ್ಮಾನ ಕೊನೇ ಗಳಿಗೆಯಲ್ಲಿ ಬದಲಿಸಿ ನೇಣುಹಾಕಿಕೊಂಡರೇ ಎಂಬುದು ತಿಳಿದುಬರಬೇಕಿದೆ.

ಬಳಿಕ ಸ್ಥಳಕ್ಕೆ ಧರ್ಮಸ್ಥಳ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವದ ಮಹಜರು ನಡೆಸಿ ದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ಪ್ರಕ್ರಿಯೆ ಮಾಡಲಾಗಿದೆ.

ಮೂಲತಃ ಧರ್ಮಸ್ಥಳ ಗ್ರಾಮದ ಬೋಳಿಯಾರು ನಿವಾಸಿಯಾಗಿರುವ ರವೀಂದ್ರನ್ ಅವರು ಪ್ರಸ್ತುತ ಕನ್ಯಾಡಿ ಗ್ರಾಮದ ನೇರ್ತನೆ ಎಂಬಲ್ಲಿ ವಾಸ್ತವ್ಯವಿದ್ದರು. ಮೃತರು ಸಂಘದಲ್ಲಿ ನಿತ್ಯನಿಧಿ ಸಂಗ್ರಾಹಕರಾಗಿರುವ ಪತ್ನಿ ಉಷಾ, ಇಬ್ಬರು ಪುತ್ರಿಯರಾದ ಕಾವ್ಯ( ಮಡಿಕೇರಿಗೆ ವಿವಾಹ ಮಾಡಿಕೊಡಲಾಗಿದೆ) ಮತ್ತು ಕವನಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ರವೀಂದ್ರನ್ ಡಿ ಅವರು ಇದೇ ತಿಂಗಳ ಮೇ ತಿಂಗಳ ಕೊನೆಗೆ ಸೇವೆಯಿಂದ ನಿವೃತ್ತರಾಗುವವರಿದ್ದರು. ಈ ನಡುವೆ ಅವರ ಮೇಲೆ ನಿವೃತ್ತಿಗಿಂತ ಮೊದಲೇ ಕೆಲಸಕ್ಕೆ ರಾಜೀನಾಮೆ ನೀಡುವ ಒತ್ತಡವಿತ್ತು ಎಂದು ಹೇಳಲಾಗುತ್ತಿದೆ. ಇದನ್ನು ಸ್ವತಃ ಅವರ ಪತ್ನಿಯೇ ಪೊಲೀಸರಿಗೆ ತಿಳಿಸಿದ್ದಾರೆ. ಆಡಳಿತ ಮಂಡಳಿಯ ಒಂದಿಬ್ಬರ ಹೆಸರನ್ನೂ ಅವರು ಸೂಚಿಸಿದ್ದಾರೆ. ನಿವೃತ್ತಿಗೂ ಮುನ್ನ ಅವರು ಸ್ವಯಂ ರಾಜೀನಾಮೆ ಸಲ್ಲಿಸಿದ್ದು ಯಾಕೆ ಎಂಬುದೇ ಈಗ ಕಾಡುತ್ತಿರುವ ಪ್ರಶ್ನೆ?

ನಿವೃತ್ತಿಪತ್ರ

ಅವರು ಸೋಮವಾರ ಬೆಳಿಗ್ಗೆ ಬರೆದಿಟ್ಟಿದ್ದಾರೆನ್ನಲಾದ ನಿವೃತ್ತಿಪತ್ರದಲ್ಲಿ, ನಾನು 1979 ರಿಂದ ಕರ್ತವ್ಯ ಸಲ್ಲಿಸುತ್ತಿದ್ದೇನೆ. ಮೇ 31 ರಂದು ನಿವೃತ್ತಿಯಾಗಲಿದ್ದೇನೆ. ಆದರೂ ಸ್ವಲ್ಪ ಬೇಗವೇ ವಿರಮಿಸಬೇಕೆಂದಿದ್ದೇನೆ. ಇದರಿಂದ ಉತ್ತರಾಧಿಕಾರಿಯನ್ನು ನೇಮಿಸಲು ಆಡಳಿತ ಮಂಡಳಿಗೆ ಅನುಕೂಲವಾಗಲಿದೆ ಎಂದು ಭಾವಿಸಲಾಗಿದೆ. ಆದುದರಿಂದ ನಿಯಮಾನುಸಾರ ನನಗೆ ಸಿಗಬೇಕಾದ ನಿವೃತ್ತಿ ವೇತನ ಸೌಲಭ್ಯಗಳನ್ನು ನನ್ನ ಎಸ್.ಬಿ ಖಾತೆಗೆ ವರ್ಗಾಯಿಸುವ ಮೂಲಕ ನನ್ನನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕು ಎಂದು ಅಪೇಕ್ಷೆ ಎಂದು ಬರೆದಿದ್ದಾರೆ.
ಪತ್ರದ ಕೆಳಗೆ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್ ಅವರ ಸಹಿಯೊಂದಿಗೆ, ಸದ್ರಿ ಪತ್ರ 9.30 ಕ್ಕೆ ಸ್ವೀಕರಿಸಲಾಗಿದೆ ಎಂದು ಬರೆಯಲಾದುದು ಕಂಡು ಬರುತ್ತದೆ.
ಸಮಗ್ರ ತನಿಖೆಗೆ ಬಂಗೇರ ಆಗ್ರಹ; ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ಅವರು, ರವೀಂದ್ರನ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು. ಯಾವ ಕಾರಣಕ್ಕೆ ಅವರು ಆತ್ಮಹತ್ಯೆಗೆ ಮುಂದಾಗಿದ್ದಾರೆ ಅದಕ್ಕೆ ಪ್ರೇರಣೆಯಾಗಿರುವುದು ಯಾವ ವಿಚಾರ ಎಂಬ ಬಗ್ಗೆ ತನಿಖೆಯಾಗಬೇಕು. ಆತ್ಮಹತ್ಯೆಗೆ ಕಾರಣಗಳು ಬಹಿರಂಗಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.