ಧರ್ಮಸ್ಥಳ: ಕೋವಿಡ್ ಕೆರ್ ಸೆಂಟರ್‌ಗಳಾಗಿ ಪರಿವರ್ತನೆಗೊಂಡ ಗ್ರಾಮಾಭಿವೃದ್ಧಿ ಯೋಜನೆ ತರಬೇತಿ ಕೇಂದ್ರಗಳು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು,  ಕೋವಿಡ್ ಕೇರ್ ಕೇಂದ್ರಗಳ ಪ್ರಮಾಣವನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನಲೆಯಲ್ಲ ಸಮಸ್ಯೆಯ ಗಂಭೀರತೆಯನ್ನು ಅರಿತ ಡಾ| ವೀರೇಂದ್ರ ಹೆಗ್ಗಡೆಯವರು ಸರ್ಕಾರಕ್ಕೆ ನೆರವು ನೀಡಲು ಮುಂದಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರಗಳನ್ನು ಕೋವಿಡ್ ಕೆರ್ ಸೆಂಟರ್‌ಗಳನ್ನಾಗಿ ಪರಿವರ್ತಿಸಲು ಆದೇಶಿಸಿದ್ದಾರೆ.

ಈ ನಿಟ್ಟಿನಲ್ಲಿ ಉಜಿರೆಯ ಜನಜಾಗೃತಿ ಮದ್ಯಮುಕ್ತ ಸಂಶೋಧನಾ ಕೇಂದ್ರ, ಮೈಸೂರಿನ ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಧಾರವಾಡದ ಜ್ಞಾನವಿಕಾಸ ತರಬೇತಿ ಕೇಂದ್ರಗಳನ್ನು ಕೋವಿಡ್ ಪೀಡಿತರ ಚಿಕಿತ್ಸೆ ಮತ್ತು ಐಸೋಲೇಶನ್ ಕೇಂದ್ರಗಳನ್ನಾಗಿ ಪರಿವರ್ತಿಸಲು  ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಈ ಮೂರು ಕೇಂದ್ರಗಳಲ್ಲಿ 175 ರೋಗಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದ್ದು, ಅಗತ್ಯ ಬಿದ್ದರೆ ತತ್‌ಕ್ಷಣದಲ್ಲಿ 800 ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಪ್ರತಿಯೊಂದು ಕೇಂದ್ರದಲ್ಲಿಯೂ ರೋಗ ಪರೀಕ್ಷೆಗೆ ಬೇಕಾಗುವ ಪ್ರಾಥಮಿಕ ಉಪಕರಣಗಳು, ಉಚಿತ ವಸತಿ ಮತ್ತು ಊಟದ ವ್ಯವಸ್ಥೆ, ಮತ್ತು ಆಕಸ್ಮಾತ್ ರೋಗ ಉಲ್ಭಣವಾದರೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಬೇಕಾಗುವ ವಾಹನ  ಸೌಲಭ್ಯವನ್ನು ಮಾಡಿದ್ದು, ಜನಜಾಗೃತಿ ಕೇಂದ್ರದಿಂದ ಪ್ರತಿಯೊಂದು ಕೇಂದ್ರಕ್ಕೆ ಇಬ್ಬರು ದಾದಿಯರನ್ನು ನಿಯೋಜಿಸಲಾಗಿದೆ. ಒಂದು ವೇಳೆ ಸೋಂಕು ಪೀಡಿತರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯ ಬಿದ್ದರೆ ವರಿಗೆ ಅವರನ್ನು ಬೇರೆ ಆಸ್ಪತ್ರೆಗೆ ವರ್ಗಾಹಿಸುವ  ವ್ಯವಸ್ಥೆಯನ್ನು ಆಸ್ಪತ್ರೆಗಳೊಡನೆ ಚರ್ಚಿಸಿ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದಲ್ಲಿ ಬೆಳ್ತಂಗಡಿಯ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಮತ್ತು ಉಡುಪಿಯಲ್ಲಿರುವ ರಾಷ್ಟ್ರೀಯ ಸ್ವಸಹಾಯ ತರಬೇತಿ ಕೇಂದ್ರವನ್ನು ಕೋವಿಡ್ ಚಿಕಿತ್ಸೆಗೆ ಒದಗಿಸುವ ಸಿದ್ಧತೆಯನ್ನು ಮಾಡಲಾಗಿದ್ದು, ಒಮ್ಮೆಲ್ಲೇ  800 ರೋಗಿಗಳಿಗೆ ಚಿಕಿತ್ಸೆ ನೀಡಬುದಾಗಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್ ಮಂಜುನಾಥ್ ತಿಳಿಸಿರುತ್ತಾರೆ.

ಗೆಳತಿ ಕೇಂದ್ರದಿಂದ ಸೋಂಕಿತರಿಗೆ ಆಪ್ತ ಸಮಾಲೋಚನೆ 
ಯೋಜನೆಯ ವತಿಯಿಂದ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ನಿರ್ದೇಶನದಂತೆ ಬೆಳ್ತಂಗಡಿಯಲ್ಲಿ ನಡೆಸಲಾಗುತ್ತಿರುವ ಗೆಳತಿ ಕೌಟುಂಬಿಕ ಸಲಹಾ ಕೇಂದ್ರದಿಂದ ಕೋವಿಡ್ ಸೋಂಕಿತರಿಗೆ ಆಪ್ತ
ಸಮಾಲೋಚನೆಯನ್ನು ನೀಡುವ ಕಾರ್ಯಕ್ರಮವನ್ನು ಪುನರ್ ಪ್ರಾರಂಭಿಸಲಾಗುತ್ತಿದ್ದು, 2020 ರಲ್ಲಿ ಕೋವಿಡ್ ರೋಗದ ಪ್ರಥಮ ಅಲೆಯಲ್ಲಿ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸೋಂಕಿತರಿಗೆ ದೂರವಾಣಿ ಮುಖೇನ ಆಪ್ತ ಸಮಾಲೋಚನೆಯನ್ನು ನಿರಂತರವಾಗಿ ಕೈಗೊಳ್ಳಲಾಗಿತ್ತು.

ಈ ಹಂತದಲ್ಲಿ ಸುಮಾರು 100 ಕ್ಕೂ ಹೆಚ್ಚಿನ ಸೋಂಕಿತರನ್ನು ಸಂಪರ್ಕಿಸಿ ಯೋಗ ಕ್ಷೇಮ ವಿಚಾರಣೆ, ಮಾನಸಿಕ ಆರೋಗ್ಯ ವಿಶ್ಲೇಷಣೆ, ಆತ್ಮ ಸ್ಥೈರ್ಯ ನಿರ್ಮಾಣ, ಕುಟುಂಬದವರ ಸಹಕಾರ, ವಿಶ್ಲೇಷಣೆ ಕುರಿತಂತೆ ಸಮಾಲೋಚನೆಯನ್ನು ನಡೆಸಲಾಗಿತ್ತು. ಈ ಕಾರ್ಯಕ್ರಮವು ನೀಡಿದ ಪರಿಣಾಮವನ್ನು ಗಮನದಲ್ಲಿಟ್ಟು ಕೊಂಡು ಇದೀಗ ಮತ್ತೊಮ್ಮೆ ಆಪ್ತ ಸಮಾಲೋಚನೆಯನ್ನು ಪ್ರಾರಂಭಿಸಲಾಗಿದೆ ಯೋಜನೆಯು ಪ್ರಕಟಣೆಯಲ್ಲಿ ತಿಳಿಸಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.