ಬೆಂದ್ರಾಳ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣ: ಮೂವರ ಬಂಧನ; ಇನ್ನಿಬ್ಬರಿಗಾಗಿ ಶೋಧ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತೋಟತ್ತಾಡಿ: ಮೂಲತಃ ಬೆಂದ್ರಾಳ ನಿವಾಸಿಯಾಗಿದ್ದು, ಶಿರಸಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಸುದರ್ಶನ್ ಅಲಿಯಾಸ್ ಹರ್ಷ ರಾಣೆ (36ವ.) ಎಂಬವರನ್ನು ಶಿರಸಿ ಮೂಲದ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಎಂಬಲ್ಲಿ ಬರ್ಬರವಾಗಿ ಹತ್ಯೆಗೈದ ಘಟನೆ ಎ.29 ರಂದು ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುದರ್ಶನ್ ರವರನ್ನು ಹತ್ಯೆಗೈದ ಆರೋಪಿಗಳಾದ ಮಂಜುನಾಥ ಬಿನ್ ನಾಗೇಂದ್ರ ಕಾಜಗಾರ, ಕಿರಣ್ ಮತ್ತು ಮಲ್ಲಿಕಜಾನ್ ಎಂಬವರನ್ನು ಪಡೆದಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಶಬ್ಬೀರ್ ಹಾಗೂ ಹಜರತ್ ಅಲಿ ಇವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಹಾಗೂ  ಕೃತ್ಯಕ್ಕೆ ಬಳಸಿದ ನೀಲಿ ಬಣ್ಣದ ಎಸ್ಮಾಸ್ ಕಾರು, ಕಬ್ಬಿಣದ ರಾಡ್ ಹಾಗೂ ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ: ತೋಟತ್ತಾಡಿಗ್ರಾಮದ ಬೆಂದ್ರಾಳ ನಿವಾಸಿ ಪುರುಷೋತ್ತಮನ್ ರವರ ಪುತ್ರರಾಗಿರುವಸುದರ್ಶನ್ ರವರು ಶಿರಸಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಪ್ಲೈವುಡ್ ವ್ಯವಹಾರ ನಡೆಸುತ್ತಿದ್ದರು. ಎ.೨೯ ರಂದು ಸಂಜೆ ಸುದರ್ಶನ್ ರವರು ತಮ್ಮ ಗೆಳೆಯನೊಂದಿಗೆ ಗುಂಜಾವತಿ ಪ್ರದೇಶದಲ್ಲಿರುವ ಹಳ್ಳಕ್ಕೆ ಮೀನು ಹಿಡಿಯಲೆಂದು ಹೋಗಿದ್ದು, ಅಲ್ಲಿಂದ ತಮ್ಮ ಬೈಕಿನಲ್ಲಿ ಮರಳುತ್ತಿರುವ ವೇಳೆ ಶಿರಸಿಯ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಎಂಬಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಇವರ ಬೈಕಿಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ರಭಸಕ್ಕೆ ಬೈಕಿನಲ್ಲಿದ್ದ ಇಬ್ಬರೂ ರಸ್ತೆಗೆ ಉರುಳಿ ಬಿದ್ದಿದ್ದು, ಆ ಸಂದರ್ಭ ಕಾರಿಲ್ಲಿದ್ದ ವ್ಯಕ್ತಿಯೋರ್ವರು ಸುದರ್ಶನ್ ರವರ ಕುತ್ತಿಗೆ ಹಾಗೂ ಕೈಗೆ ಹೊಡೆದು ಬರ್ಬರವಾಗಿ ಹತ್ಯೆಗೈದು, ಆ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಇವರ ಜೊತೆ ಇದ್ದ ಹಿಂಬದಿ ಸವಾರ ಪ್ರಾಣಭಯದಿಂದ ಅಲ್ಲಿಂದ ಅರಣ್ಯದೊಳಗೆ ಓಡಿ ಹೋಗಿದ್ದು, ನಂತರ ಮನೆಯವರಿಗೆ ವಿಚಾರ ತಿಳಿಸಿದ್ದರು.
ಹತ್ಯೆಗೀಡಾದ ಸುದರ್ಶನ್ ಹಾಗೂ ಕೊಲೆ ಆರೋಪಿ ಮಂಜುನಾಥ ರವರ ಮಧ್ಯೆ ಎರಡು ವರ್ಷಗಳಿಂದ ಯಾವುದೋ ವಿಚಾರದಲ್ಲಿ ವೈಷಮ್ಯ ಬೆಳೆದಿದ್ದು, ಇದೇ ಕಾರಣದಿಂದ ಇತರ ಆರೋಪಿಗಳೊಂದಿಗೆ ಸೇರಿಕೊಂಡು ಈತನನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು ಐಪಿಎಸ್ ರವರ ಮಾರ್ಗದರ್ಶನದಲ್ಲಿ ಪ್ರಭುಗೌಡ ಡಿ.ಕೆ ಪಿ.ಐ ಮುಂಡಗೋಡ ಹಾಗೂ ತಂಡದವರು ಸೂಕ್ತ ಕಾರ್ಯಾಚರಣೆ ನಡೆಸಿ ಎರಡು ದಿನದೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ, ಶಿರಸಿ ಪೊಲಿಸ್ ಉಪ ಅಧೀಕ್ಷಕ ರವಿ ನಾಯಕರವರ ಮಾರ್ಗದರ್ಶನದಂತೆ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಭುಗೌಡ ಡಿ.ಕೆ, ಮಹೇಶ ಪಿ.ಐ ಸಿದ್ಧಾಪೂರ ರವರ ನೇತೃತ್ವದಲ್ಲಿ ಪಿಎಸ್‌ಐ ಬಸವರಾಜ ಮಬನೂರ, ಪ್ರೋಬೆಶನರಿ ಪಿಎಸ್‌ಐ ಕಸ್ತೂರಿ ಕುಕನೂರ ಹಾಗೂ ಎಎಸ್‌ಐ ಖೀರಪ್ಪ ಘಟಕಾಂಬಳೆ, ಪೊಲೀಸ್ ಸಿಬ್ಬಂದಿಗಳಾದ ಧರ್ಮರಾಜ ನಾಯ್ಕ ಗಣಪತಿ, ರಾಘವೇಂದ್ರ ಜಿ. ರಾಘವೇಂದ್ರ ಮೂಳೆ, ಕುಮಾರ, ತಿರುಪತಿ, ಮಹೇಶ, ಗುರು ನಾಯಕ, ವಿನೋದ ಕುಮಾರ, ಭಗವಾನ, ಅರುಣಕುಮಾರ, ಅಣ್ಣಪ್ಪ, ರಾಘವೇಂದ್ರ ಪಟಗಾರ ಹಾಗೂ ಸಿದ್ದಾಪೂರ ಠಾಣೆಯ ರಾಜ್ ಮಹಮ್ಮದ ಗಂಗಾಧರ ಹೊಂಗಲ ಆರೋಪಿಗಳ ಪತ್ತೆಕಾರ್ಯದಲ್ಲಿ ಸಹಕರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.