ಪಟ್ರಮೆಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವರ್ಗ ಶತ್ರುಗಳ ಶೋಷಣೆ ಮಿತಿ ಮೀರಿದ್ದು, ಅದನ್ನು ಮೆಟ್ಟಿ ನಿಲ್ಲಲು ಸಿದ್ದರಾಗಿ: ಬಿ.ಎಂ.ಭಟ್ 

ಪಟ್ರಮೆ:  ವಿಶ್ವದ ಎಲ್ಲಾ ಶ್ರಮಜೀವಿಗಳೇ ಒಂದಾಗಿ ಎಂದು ಅಂದು ಕರೆ ನೀಡಿದ ಕಾರ್ಲ್ಸ್‌ಮಾಕ್ಸ್‌ರ ಮಾತು ಇಂದಿಗೂ ಪ್ರಸ್ತುತವಾಗಿದೆ. ಶ್ರಮಿಕ ವರ್ಗದ ವರ್ಗಶತ್ರುಗಳ ಶೋಷಣೆ, ದೌರ್ಜನ್ಯ ಇಂದು ಮಿತಿ ಮೀರಿದೆ, ತ್ಯಾಗ ಬಲಿದಾನಗಳಿಂದ ಪಡೆದ ಶ್ರಮಜೀವಿಗಳ ಹಕ್ಕುಗಳನ್ನು ಹೊಸಕು ಹಾಕುವ ಪ್ರಭುತ್ವದ ವಿರುದ್ದ ರಾಜಿ ಇಲ್ಲದ ತ್ಯಾಗಮಯ ಹೋರಾಟಕ್ಕೆ ಈ ಮೇ ದಿನಾಚರಣೆ ನಮಗೆ ಪ್ರೇರಣೆಯಾಗಲಿ ಎಂದು ಹಿರಿಯ ಕಮ್ಯೂನಿಸ್ಟ್ ನಾಯಕ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು

ಪಟ್ರಮೆಯಲ್ಲಿ ಇಂದು ನಡೆದ ವಿಶ್ವ ಕಾರ್ಮಿಕರ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು. ಕೊರೋನ ವೈರಸ್ ಸಮಸ್ಯೆಗಳಿಂದ ಬಳಲುವ ಜನರಿಗೆ ಕೆಲಸವೂ ಇಲ್ಲದೆ ಕಷ್ಟ ಪಡುತ್ತಿರುವ ಸಂದರ್ಭ ಶ್ರಮಿಕರ ಹಕ್ಕು ಸವಲತ್ತುಗಳ ಮೇಲೆ ದಾಳಿ ನಡೆಸುತ್ತಾ, ಸಾರ್ವಜನಿಕ ರಂಗಗಳ ಮಾರಾಟ ಮಾಡುತ್ತಾ, ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುತ್ತಾ, ಶ್ರಮ ಜೀವಿಗಳ ತುಳಿದು ನಡೆಯಲಾಗುತ್ತಿದೆ. ಇದರ ವಿರುದ್ದವೂ ಹೋರಾಟಕ್ಕೆ ಶ್ರಮ ಜೀವಿಗಳು ಸಿದ್ದರಾಗಬೇಕಿದೆ. ಕಾರ್ಮಿಕರ, ರೈತರ ಕಾನೂನುಗಳ ರಕ್ಷಣೆಯ ಜೊತೆಗೆ ಲಾಕ್‌ಡೌನ್ ಸಮಯ ಪೂರ್ಣ ವೇತನದ ಭರವಸೆ, ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ, ಉಚಿತ ಚಿಕಿತ್ಸೆ, ಶ್ರಮಿಕರ ಪ್ರತಿ ಕುಟುಂಬಕ್ಕೂ ಮಾಸಿಕ 10,000 ನಗದು ಹಣ, ತಲಾ 10 ಕೆಜಿ ಉಚಿತ ಅಕ್ಕಿ, ಕೋವಿಡ್ ಸೇನಾನಿಗಳ ಪೂರ್ಣ ರಕ್ಷಣೆ ಬೇಡಿಕೆಗಳು ನಮ್ಮ ಹೋರಾಟದ ಭಾಗವಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮಹಿಳಾ ನಾಯಕಿ ಕಿರಣಪ್ರಭಾ, ಮುಖಂಡರುಗಳಾದ ಬೋರಪ್ಪ, ಚೋಮ, ವಸಂತ, ಹನೀಫ್, ಸುಂದರ ಎಂ.ಕೆ, ಶರೀಫ್, ವಿನುಶ ಮೊದಲಾದವರು ಉಪಸ್ಥಿತರಿದ್ದರು.  ಶ್ಯಾಮ ರಾಜ್ ಪಟ್ರಮೆ  ಸ್ವಾಗತಿಸಿ, ಧನಂಜಯ ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.