ಬೆಂದ್ರಾಳ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತೋಟತ್ತಾಡಿ: ಮೂಲತಃ ಬೆಂದ್ರಾಳ ನಿವಾಸಿಯಾಗಿದ್ದು, ಶಿರಸಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಸುದರ್ಶನ್ ಅಲಿಯಾಸ್ ಹರ್ಷ ರಾಣೆ (36ವ.) ಎಂಬವರನ್ನು ಶಿರಸಿ ಮೂಲದ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಎಂಬಲ್ಲಿ ಬರ್ಬರವಾಗಿ ಹತ್ಯೆಗೈದ ಘಟನೆ ಎ.29 ರಂದು  ನಡೆದಿದೆ.

ಘಟನೆಯ ವಿವರ: ತೋಟತ್ತಾಡಿ  ಗ್ರಾಮದ ಬೆಂದ್ರಾಳ ನಿವಾಸಿ ಪುರುಷೋತ್ತಮನ್‌ ರವರ ಪುತ್ರರಾಗಿರುವ  ಸುದರ್ಶನ್ ರವರು ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಪ್ಲೈವುಡ್ ವ್ಯವಹಾರ ನಡೆಸುತ್ತಿದ್ದರು. ಶಿರಸಿಯ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಎಂಬಲ್ಲಿ ತಮ್ಮ ಬೈಕಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಇವರನ್ನು ಹತ್ಯೆಗೈದು  ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ವ್ಯವಹಾರ ಸಂಬಂಧಿತ ವಿಚಾರವೊಂದರಿಂದ ಕಕ್ಕಿಂಜೆ ಊರು ತೊರೆದಿದ್ದ ಅವರು ನಂತರ ತನ್ನ ಕಾರ್ಯಕ್ಷೇತ್ರವನ್ನು ಶಿರಸಿ ಭಾಗಕ್ಕೆ ಬದಲಾಯಿಸಿದ್ದರು. ಅಲ್ಲಿ ವ್ಯವಹಾರ ಕ್ಷೇತ್ರ ಗಟ್ಟಿಗೊಳಿಸಿ ವಿವಾಹವೂ ಆಗಿ ಕುಟುಂಬ ಸಮೇತ ಅಲ್ಲೇ ನೆಲೆಸಿದ್ದರು. ಇದೀಗ ಅವರನ್ನು ಕೊಲೆ‌ಮಾಡಲಾಗಿದ್ದು, ವ್ಯವಹಾರ ಅಥವಾ ಪೂರ್ವಧ್ವೇಷದ ಹಿನ್ನೆಲೆಯಲ್ಲಿ ಕೊಲೆಗೈದಿರುವ ಸಾಧ್ಯತೆ  ಇದೆ.

ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಯಾವ ಕಾರಣಕ್ಕಾಗಿ ಇವರನ್ನು ಹತ್ಯೆ ಮಾಡಲಾಗಿದೆ ಎಂಬುವುದು  ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.