ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ: ಪೇಜಾವರ ಶ್ರೀಗಳಿಂದ ನಿಧಿ ಸಮರ್ಪಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಇಲ್ಲಿಯ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಮೇ.1 ರಂದು ನಡೆಯಬೇಕಾಗಿದ್ದ ನಿಧಿ ಸಮರ್ಪಣಾ ಕಾರ್ಯಕ್ರಮ ಕೋವಿಡ್ -19 ನಿಯಮದಂತೆ ನಡೆಸಲು ಅಸಾಧ್ಯವಾಗಿದ್ದು, ಆ ಪ್ರಯುಕ್ತ ಎ.28 ರಂದು ಉಡುಪಿಯಲ್ಲಿ ಪೇಜಾವರ ಶ್ರೀಗಳು ನಿಧಿ ಸಮರ್ಪಣೆ ನೆರವೇರಿಸಿದರು.

ನಂತರ ಶ್ರೀಗಳು ಆಶೀರ್ವಚನ ನೀಡಿ, ಮಧ್ವಾಚಾರ್ಯರಿಗೂ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೂ ವಿಶೇಷ ನಂಟಿತ್ತು. ದೇವಸ್ಥಾನದಲ್ಲಿ ನಿಧಿ ಸಮರ್ಪಣಾ ಕಾರ್ಯಕ್ರಮವನ್ನು ಮೇ.1 ರಂದು ನಡೆಸಲು ಉದ್ದೇಶಿಸಿದ್ದರೂ ಕೋವಿಡ್-19 ನಿಯಮಾವಳಿಯಂತೆ ನಡೆಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಇಂದು ಇಲ್ಲಿ ನಡೆಯುತ್ತಿದೆ. ಕ್ಷೇತ್ರದ ಕೆಲಸಗಳು ನಿಗದಿತ ಸಮಯಕ್ಕೆ ಪರಿಪೂರ್ಣಗೊಳ್ಳಬೇಕು. ಗುರುಗಳು ಹಾಗೂ ಶ್ರೀ ಕೃಷ್ಣ ದೇವರ ಅನುಗ್ರಹದಿಂದ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ಸುಬ್ರಹ್ಮಣ್ಯ ಉಪ್ಪಾರ್ಣ ಕೀರ್ತನ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.