ಗರ್ಡಾಡಿ ಕೊಡಮಣಿಪಲ್ಕೆ ದೈವಸಾನಿಧ್ಯ ಪ್ರತಿಷ್ಠೆ ಮತ್ತು ನೇಮೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗರ್ಡಾಡಿ: ಗರ್ಡಾಡಿ ಗ್ರಾಮದ ಕೊಡಮಣಿಪಲ್ಕೆಯ ಅತೀ ಪುರಾತನವಾದ ಈ ಸೀಮೆಯಲ್ಲಿ ಕೊಡಮಣಿತ್ತಾಯ ಮತ್ತು ಇರ್ಲ್‌ದ ಭೂತಗಳು ಎಂದು ಪ್ರಸಿದ್ಧಿ ಪಡೆದ ಕಲ್ಕುಡ-ಕಲ್ಲುರ್ಟಿ ದೈವಗಳನ್ನು ಗಡುವಾಡು ಸ್ಥಳದಲ್ಲಿ ಆರಾಧಿಸಿಕೊಂಡು ಬರುತ್ತಿದ್ದು, ಈ ದೈವಗಳ ಗಡುವಾಡು ಸ್ಥಳವು ರಾಜ್ಯ ಹೆದ್ದಾರಿ ಬದಿಯಲ್ಲಿ ಜೀರ್ಣೋದ್ಧಾರಗೊಂಡು ದೈವ ಸಾನಿಧ್ಯಗಳ ಪ್ರತಿಷ್ಠೆ ಹಾಗೂ ನೇಮೋತ್ಸವ ಜರುಗಿತು.
ಬೆಳಿಗ್ಗೆ 6 ಗಂಟೆಗೆ ಗರ್ಡಾಡಿ ಗುತ್ತುವಿನಿಂದ ಭಂಡಾರ ಬಂದು 7.30ಕ್ಕೆ ಧರ್ಮದೈವಗಳನ್ನು ಪ್ರತಿಷ್ಠಾಪಿಸಲಾಯಿತು. ಡೆಂಜೋಳಿಯ ಉದಯ ಮಂಜಿತ್ತಾಯರವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ರಾತ್ರಿ ದೈವಗಳಿಗೆ ನೇಮೋತ್ಸವ ಜರುಗಿತು.
ಕೊಡಮಣಿಪಲ್ಕೆ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಹಾಗೂ ಶಾಸಕ ಹರೀಶ್ ಪೂಂಜ, ಊರ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀ ದೈವಗಳ ಗಂಧಪ್ರಸಾದ ಸ್ವೀಕರಿಸಿದರು.
ಸಮಿತಿಯ ಅಧ್ಯಕ್ಷ ಚಂದ್ರಶೇಖರ ಗೌಡ, ಕಾರ್ಯದರ್ಶಿ ಹರೀಶ್ ಕೋಟ್ಯಾನ್, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದು, ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.