ಬೆಳ್ತಂಗಡಿ : ಲಯನ್ಸ್ ಪ್ರಾಂತ್ಯಾಧ್ಯಕ್ಷರಾಗಿ ಲ| ಧರಣೇಂದ್ರ ಕೆ. ಜೈನ್ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 1ರ ಪ್ರಾಂತ್ಯಾಧ್ಯಕ್ಷರಾಗಿ ಲ|ಧರಣೇಂದ್ರ ಕೆ ಜೈನ್‌ರವರನ್ನು ಲಯನ್ಸ್ ರಾಜ್ಯಪಾಲರಾದ ಲ|ವಸಂತ ಕುಮಾರ್ ಶೆಟ್ಟಿ ಇವರು ಆಯ್ಕೆ ಮಾಡಿರುತ್ತಾರೆ. ಇವರು 2014ರಲ್ಲಿ ಲಯನ್ಸ್ ಸೇವಾ ಸಂಸ್ಥೆಗೆ ಬೆಳ್ತಂಗಡಿ ಲಯನ್ಸ್ ಕ್ಲಬ್ ಮುಖಾಂತರ ಪಾದಾರ್ಪಣೆಗೈದು 2015-16ರಲ್ಲಿ ಪ್ರತಿಷ್ಠಿತ ಸಂಸ್ಥೆಯ ಕಾರ್ಯದರ್ಶಿಯಾಗಿ ಲಯನ್ಸ್ ಮಲ್ಟಿಪಲ್‌ನಲ್ಲಿಯೇ ಗೋಲ್ಡನ್ ಕಾರ್ಯದರ್ಶಿ ಎಂಬ ಪದವಿಯನ್ನು ಪಡೆದಿರುತ್ತಾರೆ.

ಧರಣೇಂದ್ರ ಕೆ ಇವರು 2017-18ರ ಸಾಲಿನ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಸುಮಾರು 55 ವಿಭಾಗಗಳಲ್ಲಿ ಗೌರವ ಪುರಸ್ಕಾರವನ್ನು ಘಟಕಕ್ಕೆ ತಂದು ಕೊಡುವಲ್ಲಿ ಶ್ರಮಿಸಿದ್ದು,. ಇವರು 2018-19ರ ಸಾಲಿನಲ್ಲಿ ವಲಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಬೆಳ್ತಂಗಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪೂರ್ವಾಧ್ಯಕ್ಷರಾಗಿ, ಜೇಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪ್ರಕೃತ ಸಾಲಿನ ರಾಜ್ಯ ಪರಿಷತ್ ಸದಸ್ಯರಾಗಿ, ರಾಜ್ಯಮಟ್ಟದ ಓರ್ವ ಉತ್ತಮ ತರಬೇತುದಾರರಾಗಿ, ಸಾವಿರಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳನ್ನು ವಿವಿಧ ಕಡೆಗಳಲ್ಲಿ ನಿರೂಪಿಸಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯು 2021-22ರ ಸಾಲಿಗೆ ಪ್ರಾಂತ್ಯ 1ರ ಪ್ರಾಂತ್ಯಾಧ್ಯಕ್ಷರನ್ನಾಗಿ ಧರಣೇಂದ್ರ ಕೆ ಜೈನ್‌ ಆಯ್ಕೆಗೊಳಿಸಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.