ಕಡಿರುದ್ಯಾವರ: ಹೇಡ್ಯ ಮಾರಿಯಮ್ಮ ಗುಡಿಯ ಬಳಿ ದನದ ತಲೆ ಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಡಿರುದ್ಯಾವರ: ಇಲ್ಲಿನ ಹೇಡ್ಯ ಮಾರಿಯಮ್ಮ ಗುಡಿಯ ಬಳಿ ಎ.14ರ ರಾತ್ರಿ ದನದ ತಲೆಯೊಂದು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಯಾರೋ ದುಷ್ಕರ್ಮಿಗಳು ಬುಧವಾರ ರಾತ್ರಿ ಈ ದುಷ್ಕೃತ್ಯ ವೆಸಗಿರಬಹುದು ಎಂದು ಶಂಕಿಸಲಾಗಿದ್ದು, ರಾತ್ರಿಯೇ ಅಲ್ಲಿನ ಕೆಲವರ ಗಮನಕ್ಕೆ ಬಂದಿದೆ. ಈ ಹಿನ್ನಲೆ ಅಲ್ಲಿನ ಕೆಲ ಮುಖಂಡರುಗಳು ಆ ದನದ ತಲೆಯನ್ನು ಗುಂಡಿ ತೆಗೆದು ಸಂಸ್ಕಾರ ಮಾಡಿದ್ದು, ಯಾರೋ ಅಪರಿಚಿತ ವ್ಯಕ್ತಿಗಳು ಕೃತ್ಯ ಎಸಗಿರುವ ಬಗ್ಗೆ  ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ಸುತ್ತ ಮುತ್ತಲ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಚಾಲ್ತಿಯಲ್ಲಿರುವ ಶಂಕೆ ಮೂಡಿದ್ದು, ಇದು ಬೇರೆ ಯಾವುದೋ ದುಷ್ಕೃತ್ಯದ ಹಿಂದಿನ ಸಂಚಿರಬಹುದು ಎಂಬ ಶಂಕೆಯೂ ಇದೆ. ಘಟನೆ ಕುರಿತು ಪರಿಶೀಲನೆ ನಡೆಯುತ್ತಿದ್ದು, ಈ ಎಲ್ಲ ಗೊಂದಲಗಳಿಗೆ ತೆರೆ ಬೀಳ ಬೇಕಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.