ರೋಟರಿ ಕ್ಲಬ್ ನಿಂದ ಬಂಗಾಡಿ ಸರಕಾರಿ ಶಾಲೆಗೆ 60ಸಾವಿರ ಮೌಲ್ಯದ ಡೆಸ್ಕ್, ಬೆಂಚುಗಳ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್  ವತಿಯಿಂದ “ಟೀಚ್” ಕಾರ್ಯಕ್ರಮದಡಿಯಲ್ಲಿ ಬಂಗಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ 60,000/- ಮೌಲ್ಯದ 10 ಡೆಸ್ಕ್ ಹಾಗೂ ಬೆಂಚ್ ಗಳನ್ನು ಎ.16 ರಂದು ಹಸ್ತಾಂತರಿಸಲಾಯಿತು. ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ರವರು ಡೆಸ್ಕ್ ಮತ್ತು ಬೆಂಚ್ ಗಳನ್ನು  ಶಾಲೆಯ ಮುಖ್ಯ ಶಿಕ್ಷಕ  ಅಮಿತಾನಂದ್ ಹೆಗ್ಡೆಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ.ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ ಕೆ.ವಿ, ಬಾಬು ಪೂಜಾರಿ , ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ವಿಶ್ವನಾಥ, ಬೆಳ್ತಂಗಡಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್, ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷ ಆನಂದ ಅಡೀಲು, ಗ್ರಾ.ಪಂ ಸದಸ್ಯೆ ಹರಿಣಾಕ್ಷಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಪರವಾಗಿ ಎಂ.ಎಲ್ .ಸಿ  ಕೆ.ಪ್ರತಾಪ ಸಿಂಹ ನಾಯಕ್  ರವರನ್ನು ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಲಾಯಿತು ಹಾಗೂ ಶಾಲಾ ಶಿಕ್ಷಕರಿಗೆ ಹಾಗೂ ಅತಿಥಿಗಳಿಗೆ ರೋಟರಿ ಕ್ಲಬ್ ವತಿಯಿಂದ ಫೇಸ್ ಮಾಸ್ಕ್ ಗಳನ್ನು ವಿತರಿಸಲಾಯಿತು

ಸಮೂಹ ಸಂಪನ್ಮೂಲ ವ್ಯಕ್ತಿ (CRP) ರಮೇಶ್ ಬಂಗಾಡಿ ಸ್ವಾಗತಿಸಿದರು . ಶಾಲಾ ಮುಖ್ಯ ಶಿಕ್ಷಕ ಅಮಿತಾನಂದ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.